Advertisements

ಏನಿದು ಎಸ್-400 ಟ್ರಯಂಫ್? Part of ಅಚ್ಛೇ ದಿನ್….

ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದ ಮೇಲೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಎಸ್ -400 ಟ್ರಯಂಫ್. ಅಮೆರಿಕಾದ ನಿರ್ಬಂಧ, ಒತ್ತಡಗಳ ನಡುವೆ ಭಾರತ- ರಷ್ಯಾ ಶುಕ್ರವಾರ ಮಾಡಿಕೊಂಡ ಐತಿಹಾಸಿಕ ಎಸ್ -400 ಟ್ರಯಂಫ್ ಒಪ್ಪಂದ ಇಡೀ ವಿಶ್ವದ ಗಮನ ಸೆಳೆದಿದೆ.

ಈ ಒಪ್ಪಂದ ಪಕ್ಕದ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರದಲ್ಲಿ ನಡುಕ ಹುಟ್ಟಿಸಿದ್ದು ಕೂಡಾ ಅಷ್ಟೇ ಸತ್ಯ.

ಹಾಗಾದ್ರೆ ಏನಿದು ಎಸ್-400 ಟ್ರಯಂಫ್ ಅನ್ನುವುದನ್ನು ನೋಡುವುದಾದರೆ, ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮರ್ಥ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ ಇದು. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ನಿಷ್ಕ್ರೀಯ ಮಾಡುವುದು ಸುಲಭದ ಮಾತಲ್ಲ. ಆದರೆ ಈ ವ್ಯವಸ್ಥೆಯಿಂದ ಶತ್ರು ರಾಷ್ಟ್ರ ಕ್ಷಿಪಣಿ ಹಾರಿಬಿಟ್ಟರೆ ಅದನ್ನು ಎಸ್-400 ಟ್ರಯಂಫ್ ಗುರುತಿಸುತ್ತದೆ. ಮಾತ್ರವಲ್ಲದೆ ಆಕಾಶದಲ್ಲೇ ಆ ಕ್ಷಿಪಣಿಯನ್ನು ಹೊಡೆದು ಉರುಳಿಸುತ್ತದೆ.

S-400 Triumf2

ಮಹಾಭಾರತದ ಧಾರಾವಾಹಿಯ ಯುದ್ಧ ದೃಶ್ಯಗಳನ್ನು ನೆನಪಿಸಿಕೊಂಡರೆ, ಕೌರವರು ಬಿಟ್ಟ ಬಾಣಗಳನ್ನು ಪಾಂಡವರು ಮತ್ತೊಂದು ಬಾಣವನ್ನು ಹೂಡಿ ಆಕಾಶದಲ್ಲೇ ಮುರಿದು ಹಾಕುತ್ತಿದ್ದರು. ಹಾಗೇ ಇಲ್ಲೂ ಆಧುನಿಕ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ.

ಕೇವಲ ಕ್ಷಿಪಣಿ ಮಾತ್ರವಲ್ಲದೆ ಶತ್ರು ರಾಷ್ಟ್ರದ ಯುದ್ಧ ವಿಮಾನಗಳನ್ನು ಕೂಡಾ ಇದು ಹೊಡೆದುರುಳಿಸುತ್ತದೆ. 380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸುವ ಸಾಮರ್ಥ್ಯ ಇದಕ್ಕಿದೆ.

ಲಾರಿಯ ಹಿಂಭಾಗದಲ್ಲಿ 400 ಟ್ರಯಂಫ್ ವ್ಯವಸ್ಥೆ ಅಳವಡಿಸಿರುವುದರಿಂದ ದೇಶದ ಅದ್ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ.

S-400 Triumf1

ಈ ವಾಯು ರಕ್ಷಣಾ ವ್ಯವಸ್ಥೆಯಿಂದ ಏಕಕಾಲದಲ್ಲಿ 72 ಕ್ಷಿಪಣಿಗಳನ್ನು ಸಿಡಿಸಬಹುದಾಗಿದ್ದು, ಒಂದೇ ಬಾರಿಗೆ 36 ಟಾರ್ಗೆಟ್ ಇಡಬಹುದಾಗಿದೆ

1999ರಲ್ಲಿ ಮೊದಲ ಬಾರಿಗೆ ಇದನ್ನು ಅಸ್ಟ್ರಖಾನ್ ವಲಯದಲ್ಲಿ ಪ್ರದರ್ಶಿಸಲಾಗಿತ್ತು.2000ದಲ್ಲಿ ಆಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. 2007 ಏಪ್ರಿಲ್ ನಿಂದ ಈ ಕ್ಷಿಪಣಿ ವ್ಯವಸ್ಥೆ ಸೇವೆ ಪ್ರಾರಂಭಿಸಿದೆ.

ಎಸ್- 400 ವ್ಯವಸ್ಥೆಯಲ್ಲಿ ಎತ್ತರದ ರೇಡಾರ್, ಅಂಟೆನಾ ಗಾಗಿ ಚಲಿಸಬಲ್ಲ ಟವರ್ ಮತ್ತಿತರ ವ್ಯವಸ್ಥೆಗಳನ್ನು ಹೆಚ್ಚುವರಿಯಾಗಿ ಹೊಂದಿದೆ.

600 ಕಿಲೋ ಮೀಟರ್ ದೂರದವರೆಗೂ ಇದು ಗುರಿ ತಲುಪಲಿದೆ. ಕ್ಷಿಪಣಿ ವಿನಾಶ ವ್ಯಾಪ್ತಿಯು ಐದು ಕಿಲೋಮೀಟರ್ ಗಳಿಂದ 60 ಕಿ.ಮೀವರೆಗೂ ಬದಲಾಗುತ್ತದೆ.

ಪಾಕ್ ಬಳಿ ಇರುವ 20 ಫೈಟರ್ ಸ್ಕ್ವಾಡ್ ಡ್ರೋನ್ಸ್ ಹಾಗೂ ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ಡ್ರೋನ್ ಹಾಗೂ ಫೈಟರ್ ವಿಮಾನಗಳನ್ನು ಈಗ ಎದುರಿಸುವುದು ನಮಗೆ ಕಷ್ಟ. ಹೀಗಾಗಿ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ.ಈ ಮೂಲಕ ಭಾರತದ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.

ಈಗಾಗಲೇ ರಷ್ಯಾದಿಂದ ಚೀನಾ ಈ ವ್ಯವಸ್ಥೆಯನ್ನು ಪಡೆದುಕೊಂಡಿದ್ದು, ಈ ಸಂಬಂಧ 2014ರಲ್ಲೇ ಚೀನಾ ಒಪ್ಪಿಂದ ಮಾಡಿಕೊಂಡಿತ್ತು. ಇನ್ನು ಟರ್ಕಿ ಕೂಡಾ ಕೆಲವೇ ವರ್ಷಗಳಲ್ಲಿ ಈ ವ್ಯವಸ್ಥೆಯನ್ನು ರಷ್ಯಾದಿಂದ ಪಡೆಯಲಿದೆ. ಇದೀಗ ಭಾರತ ಒಪ್ಪಂದ ಮಾಡಿಕೊಂಡ ಬೆನ್ನಲೇ ಕತಾರ್ ಎಸ್-400 ಖರೀದಿಸಲು ಮುಂದೆ ಬಂದಿದೆ.

ಈಗ ಹೇಳಿ ಭಾರತಕ್ಕೆ ಅಚ್ಛೇ ದಿನ್ ಬರುತ್ತಿಲ್ಲ ಎಂದು.

Advertisements

Leave a Reply

%d bloggers like this: