Advertisements

ನಷ್ಟ ತಪ್ಪಿಸಲು ಪ್ರಯಾಣಿಕರ ಚೀಸ್ ಗೆ ಕೈ ಹಾಕಿದ ಏರ್ ಇಂಡಿಯಾ

ಹಿಂದೊಮ್ಮೆ ಅಮೆರಿಕನ್ ಏರ್‌ಲೈನ್ಸ್ ಪ್ರಯಾಣಿಕರ ಊಟದ ಮೆನುವಿನಲ್ಲಿದ್ದ ಆಲಿವ್‌ ಎಲೆಗೆ ಕತ್ತರಿ ಹಾಕಿ 40,000 ಡಾಲರ್ ಉಳಿತಾಯ ಮಾಡಿತ್ತು.

ಇದೀಗ 30 ವರ್ಷಗಳ ಹಿಂದಿನ ನಿರ್ಧಾರವನ್ನು ಅಳವಡಿಸಿಕೊಳ್ಳಲು ನಷ್ಟದ ಹಾದಿಯಲ್ಲಿರುವ ಏರ್ ಇಂಡಿಯಾ ಮುಂದಾಗಿದೆ.

ಈಗಾಗಲೇ ನಷ್ಟದ ಪ್ರಮಾಣವನ್ನು ತಪ್ಪಿಸುವ ಸಲುವಾಗಿ ತಡವಾಗಿ ಕೆಲಸಕ್ಕೆ ಹಾಜರಾಗುವ ಏರ್ ಇಂಡಿಯಾ ಸಿಬ್ಬಂದಿಗಳು ಕ್ಯಾಬ್ ವೆಚ್ಚವನ್ನು ತಾವೇ ಭರಿಸಬೇಕು ಎಂದು ಸೂಚಿಸಿತ್ತು. ಜೊತೆಗೆ ಶಿಸ್ತುಕ್ರಮದ ರೂಪದಲ್ಲಿ ಒಂದು ವರ್ಷ ದೇಶೀಯ ಯಾನ ಮಾತ್ರ ಕೈಗೊಳ್ಳಲು ನಿಯೋಜಿಸಲಾಗುತ್ತದೆ ಎಂದು ಸೂಚನೆ ನೀಡಿತ್ತು.

ಇದೀಗ ಲಾಭದ ಪ್ರಮಾಣ ಕಡಿಮೆ ಮಾಡಲು ಅಂತಾರಾಷ್ಟ್ರೀಯ ಯಾನದ ಸಂದರ್ಭದಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದ ಸ್ನ್ಯಾಕ್ಸ್ ಮತ್ತು ಬ್ರೇಕ್‌ಫಾಸ್ಟ್‌ನಲ್ಲಿ ಚೀಸ್‌ನ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗಿದೆ.

ಏರ್ ಇಂಡಿಯಾ ಕೊಟ್ಟ ಚೀಸ್ ಅನ್ನು ಪ್ರಯಾಣಿಕರು ಪೂರ್ತಿ ಬಳಸುತ್ತಿರಲಿಲ್ಲ, ಇದರಿಂದ ಭಾರೀ ಪ್ರಮಾಣದ ಚೀಸ್ ಬಳಕೆಯಾಗದೆ ವ್ಯರ್ಥವಾಗುತ್ತಿತ್ತು. ಹೀಗಾಗಿ ಹನಿ ಹನಿ ಸೇರಿ ಹಳ್ಳ ಅನ್ನುವಂತೆ ಏರ್‌ ಇಂಡಿಯಾಗೆ ದೊಡ್ಡ ಮೊತ್ತ ನಷ್ಟವಾಗುತ್ತಿತ್ತು. ಈ ನಷ್ಟ ತಪ್ಪಿಸಲು ಏರ್ ಇಂಡಿಯಾ ಚೀಸ್‌ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಇದರಿಂದ ಸರಿ ಸುಮಾರು 2.5 ಕೋಟಿ ರೂ. ಉಳಿತಾಯವಾಗಲಿದೆಯಂತೆ.

Advertisements

Leave a Reply

%d bloggers like this: