Advertisements

ಮುಳಬಾಗಿಲು ತಾಲೂಕು ಕಚೇರಿಗೆ ನುಗ್ಗಿದ ದನ ಕರು, ಕೋಳಿ ನಾಯಿ

ಕುಮಾರಸ್ವಾಮಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಂಪುಟದ ಸಚಿವರು ಕುಮಾರಸ್ವಾಮಿ ವೇಗಕ್ಕೆ ಓಡುತ್ತಿಲ್ಲ ಅನ್ನುವುದೇ ದುರಂತ. ಇದಕ್ಕೊಂದು ಸ್ಪಷ್ಟ ಉದಾಹರಣೆ ಕಂದಾಯ ಸಚಿವರ ಕೆಲಸ.

ಕೋಲಾರ ಮುಳಬಾಗಿಲು ತಾಲೂಕಿನ ತಹಶೀಲ್ದಾರ್ ಹುದ್ದೆ ಖಾಲಿಯಾಗಿ 6 ತಿಂಗಳು ಕಳೆದಿದೆ. ಇಲ್ಲಿಗೊಂದು ತಹಶೀಲ್ದಾರ್ ನೇಮಿಸುವ ಯೋಗ್ಯತೆ ಕಂದಾಯ ಸಚಿವರಿಗೆ ಇಲ್ಲದಂತಾಗಿದೆ.

ಮಾತ್ರವಲ್ಲದೆ ತಾಲೂಕಿನಲ್ಲಿ 36 ಸರ್ಕಾರಿ ಹುದ್ದೆಗಳು ಖಾಲಿ ಇದೆ. ಹೀಗಾಗಿ ತಾಲೂಕು ಜನ ನಿತ್ಯದ ಕೆಲಸಗಳಿಗಾಗಿ ಪರದಾಡುತ್ತಿದ್ದಾರೆ. ಪಹಣಿ, ಆದಾಯ, ಜಾತಿ ಪ್ರಮಾಣ ಪತ್ರ ಹೀಗೆ ತುರ್ತಾಗಿ ಆಗಬೇಕಾದ ಕೆಲಸಗಳನ್ನು ಕೇಳುವವರೇ ಇಲ್ಲದಂತಾಗಿದೆ.

ಮನವಿ ಕೊಟ್ಟು ಕೊಟ್ಟು ಸುಸ್ತಾದ ನಾಗರಿಕರು,ಕಿಸಾನ್ ಕಾರ್ಯಕರ್ತರ ಜೊತೆ ಸೇರಿ, ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಒತ್ತಾಯಿಸಿ ದನಕರು, ಕೋಳಿ ಮತ್ತು ನಾಯಿಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿದರು.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು

Advertisements

Leave a Reply

%d bloggers like this: