Advertisements

ಬಿಗ್ ಬಾಸ್ ಮನೆಯಿಂದ ಶ್ರೀಶಾಂತ್ ಹೊರ ನಡೆಯದಿರಲು ಕಾರಣ ಗೊತ್ತಾ…?

ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಹೋಗುವುದಾಗಿ ಶ್ರೀಶಾಂತ್ ಹೇಳುತ್ತಿದ್ದಾರೆ.

ಮನೆಯಲ್ಲಿ ನಡೆಯುತ್ತಿರುವ ಕಿತ್ತಾಟ, ಜಗಳದಿಂದ ಬೇಸತ್ತ ಅವರು ಈ ಮಾತು ಹೇಳಿದ್ದಾರೆ. ಆದರೆ ಅವರು ಅಷ್ಟು ಸುಲಭವಾಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆಯುವುದಿಲ್ಲ. ಕಾರಣವೇನು ಅನ್ನುವುದನ್ನು ಕೊನೆಯಲ್ಲಿ ಹೇಳ್ತಿವಿ.

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರಬೇಕು ಎಂದು ಶ್ರೀಶಾಂತ್ ಗೆ ಹಲವು ವರ್ಷಗಳಿಂದ ಆಹ್ವಾನ ಹೋಗುತ್ತಿದೆ. ಆದರೆ ಅವರು ಮನೆಯೊಳಗೆ ಬರಲು ನಿರಾಕರಿಸಿದ್ದರು. ಇತ್ತೀಚೆಗೆ ಪ್ರಾರಂಭವಾದ ಮಲಯಾಳಂ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಅವರನ್ನು ಕರೆ ತರಲು ಯತ್ನಿಸಲಾಗಿತ್ತು. ಆದರೆ ಅವರು ಅದನ್ನು ನಯವಾಗಿ ತಿರಸ್ಕರಿಸಿದ್ದರು.

ಕೊನೆಗೆ ಸಲ್ಮಾನ್ ಖಾನ್ ಅವರ ಆಗ್ರಹಕ್ಕೆ ಮಣಿದ ಶ್ರೀಶಾಂತ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಇದರ ಬೆನ್ನಲ್ಲೇ ಸಂಭಾವನೆ ವಿಚಾರದಲ್ಲೂ ಸುದ್ದಿಯಾಗಿದ್ದಾರೆ.

ಈವರೆಗೆ ಬಿಗ್ ಬಾಸ್ ಮನೆಯಲ್ಲಿ ಭಜನೆಗಳ ಸಾಮ್ರಾಟ’ ಅನೂಪ್ ಜಲೋಟಗೆ ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಸುದ್ದಿ ಹಬ್ಬಿತ್ತು. ವಾರವೊಂದಕ್ಕೆ ಜಲೋಟ 40 ಲಕ್ಷ ರೂಪಾಯಿ ಸಂಭಾವನೆ ಗಳಿಸುತ್ತಿದ್ದಾರೆ ಎನ್ನಲಾಗಿತ್ತು.

ಇದೇ ವೇಳೆ ಶ್ರೀಶಾಂತ್ ಗೆ ವಾರವೊಂದಕ್ಕೆ ಐದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ ಇದೀಗ ಗೊತ್ತಾಗಿರುವ ಮಾಹಿತಿ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವವರು ಶ್ರೀಶಾಂತ್ ಎನ್ನಲಾಗಿದೆ. ಶ್ರೀಶಾಂತ್ ಗೆ ವಾರವೊಂದಕ್ಕೆ ಐವತ್ತು ಲಕ್ಷಕ್ಕೂ ಹೆಚ್ಚು ಸಂಭಾವನೆ ಸಂದಾಯವಾಗುತ್ತಿದೆ.’ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಅಂದ್ರೆ ಅದು ಶ್ರೀಶಾಂತ್ ಅನ್ನಲಾಗಿದೆ.

ಇನ್ನು ಬಿಗ್ ಬಾಸ್ ಕಾರ್ಯಕ್ರಮದಿಂದ ಶ್ರೀಶಾಂತ್ ಸ್ವಯಂ ಇಚ್ಛೆಯಿಂದ ಹೊರನಡೆದರೆ, ಐವತ್ತು ಲಕ್ಷ ದಂಡ ತೆರಬೇಕಾಗುತ್ತದೆಯಂತೆ. ಅಂತಹುದೊಂದು ಒಪ್ಪಂದಕ್ಕೆ ಶ್ರೀಶಾಂತ್ ಸಹಿ ಹಾಕಿದ್ದಾರಂತೆ. ಹೀಗಾಗಿ ಹೋಗ್ತಿನಿ ಹೋಗ್ತಿನಿ ಎಂದು ಅವರು ಹೇಳುತ್ತಿದ್ದಾರೆ. ಹೊರತು ಹೋಗುವುದಿಲ್ಲವಂತೆ.

Advertisements

Leave a Reply

%d bloggers like this: