Advertisements

ಆಮಿ ಜಾಕ್ಸನ್ ವಿರುದ್ಧ ಗರಂ ಆಗಿದ್ದಾರಂತೆ ಪ್ರೇಮ್…

ಚಂದನವನದ ಬಹು ನಿರೀಕ್ಷಿತ, ದಿ ವಿಲನ್ ಸಿನಿಮಾ ಬಿಡುಗಡೆ ಮುಹೂರ್ತ ನಿಗದಿಯಾಗಿದೆ.ಇದೇ ತಿಂಗಳು 18 ರಂದು ದೇಶಾದ್ಯಂತ ತೆರೆಗೆ ಅಪ್ಪಳಿಸಲಿದ್ದು. ಶಿವರಾಜ್ ಕುಮಾರ್ ಹಾಗೂ ಸುದೀಪ್ ಜೋಡಿಯ ಚಿತ್ರ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ನಡುವೆ ಚಿತ್ರದ ನಿರ್ದೇಶಕ ಪ್ರೇಮ್ ಆಮಿ ಜಾಕ್ಸನ್ ವಿರುದ್ಧ ಗರಂ ಆಗಿದ್ದಾರೆ ಅನ್ನುವ ಸುದ್ದಿ ಬಂದಿದೆ.

ನಟಿ ಆಮಿ ಜಾಕ್ಸನ್ ಮೇಲೆ ಪ್ರೇಮ್ ಸಿಟ್ಟಾಗಿರುವುದು ಚಿತ್ರದ ಪ್ರಮೋಷನ್ ವಿಚಾರದಲ್ಲಿ.ದಿ ವಿಲನ್ ಸಿನಿಮಾ ಬಿಡುಗಡೆಗೆ ಇರುವುದು ಕೆಲವೇ ದಿನ. ಅದ್ದೂರಿ ಪ್ರಚಾರ ಸಾಗಿದೆ. ಪ್ರಚಾರ ಸಾಕಾಗಿಲ್ಲ ಅನ್ನುವ ಕೊರಗು ಚಿತ್ರ ತಂಡವನ್ನು ಕಾಡುತ್ತಿದೆ. ಈ ನಡುವೆ ಆಮಿ ಜಾಕ್ಸನ್ ಚಿತ್ರದ ಪ್ರಚಾರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಪ್ರೇಮ್ ಅವರ ಬಿಪಿ ಏರಿಸಿದೆ.

ದುಬೈನಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದು ಬಿಟ್ಟರೆ, ಮತ್ತೆ ವಿಲನ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ನಟಿಯಾಗಿ ಆಮಿ ಸಿನಿಮಾದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಆದ್ರೆ ಚಿತ್ರದ ಪ್ರಮೋಷನ್ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ.ಪ್ರಚಾರದ ವಿಚಾರವಾಗಿ ಸಂಪರ್ಕ ಮಾಡಿದರೆ ಅದೆಷ್ಟೋ ದಿನವಾದ ಮೇಲೆ ಆ ಕಡೆಯಿಂದ ಪ್ರತಿಕ್ರಿಯೆ ಬರುತ್ತಿದೆ ಎಂದು ಪ್ರೇಮ್ ಅಸಮಾಧಾನ ಹೊರಹಾಕಿದ್ದಾರೆ.

ಶೂಟಿಂಗ್ ವೇಳೆ ಆಮಿ ಜಾಕ್ಸನ್ ಗೆ ತಕ್ಕ ಹಾಗೆ ಚಿತ್ರ ತಂಡ ಡೇಟ್ ಹೊಂದಾಣಿಕೆ ಮಾಡಿಕೊಂಡಿತ್ತು, ಶಿವರಾಜ್ ಕುಮಾರ್, ಸುದೀಪ್ ಆಮಿ ಅವರ ಸಮಯಕ್ಕೆ ತಕ್ಕ ಹಾಗೆ ಎಷ್ಟೋ ಬಾರಿ ಚಿತ್ರೀಕರಣಕ್ಕೆ ಬಂದಿದ್ದರು. ಆದರೆ, ಈಗ ಆಮಿ ಜಾಕ್ಸನ್ ಬೇರೆ ಕೆಲಸದಲ್ಲಿ ಬ್ಯುಸಿಯಾದರೆ ಹೇಗೆ ಅಲ್ವ.

ಏನು ಮಾಡೋದು ಪರಭಾಷಾ ನಟಿಯನ್ನು ತಂದ ಕರ್ಮಕ್ಕೆ ಈಗ ಅನುಭವಿಸಲೇಬೇಕು.

Advertisements

One Comment on “ಆಮಿ ಜಾಕ್ಸನ್ ವಿರುದ್ಧ ಗರಂ ಆಗಿದ್ದಾರಂತೆ ಪ್ರೇಮ್…

  1. Pingback: ಏನಿದು ಪ್ರೇಮ್…. ಮೊದಲ ವಾರ ದಿ ವಿಲನ್ ಪ್ರೇಕ್ಷಕರಿಗೆ ಬರೆ…. – torrentspree

Leave a Reply

%d bloggers like this: