ತಿರುಮಂತ್ರ ಹಾಕಿದ ಪೊಲೀಸರು –ಕಳ್ಳರನ್ನು ಬಂಧಿಸಲು ಗ್ರಾಹಕರಾದ ಖಾಕಿಗಳು

ಗ್ರಾಹಕರ ಸೋಗಿನಲ್ಲಿ ಸ್ಟುಡಿಯೋಗಳಲ್ಲಿ ಕ್ಯಾಮಾರ ಕದಿಯುತ್ತಿದ್ದ ಇಬ್ಬರು ಖದೀಮರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ವಿದ್ಯಾರಣ್ಯಪುರದ ಶೇಖ್ ಲುಕ್ಮಾನ್(27) ಮತ್ತು ಜಾವೇದ್ (30) ಎಂದು ಗುರುತಿಸಲಾಗಿದೆ.

ಆರೋಪಿಗಳು ವ್ಯವಸ್ಥಿತವಾಗಿ ಕಳ್ಳತನಕ್ಕೆ ಪ್ಲಾನ್ ಹಾಕುತ್ತಿದ್ದರು. ಮೊದಲು ಜಾವೇದ್ ಗ್ರಾಹಕರ ಸೋಗಿನಲ್ಲಿ ಸ್ಟುಡಿಯೋಗೆ ಎಂಟ್ರಿ ಕೊಡುತ್ತಿದ್ದ.

ಫೋಟೋ ತೆಗೆಸಿ ಸ್ಟುಡಿಯೋ ಮಾಲೀಕರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಹದಿನೈದು ದಿನಕ್ಕೆ ಸಹೋದರನ ಮದುವೆ ಇದೆ. ಕನಿಷ್ಟ 5 ಲಕ್ಷ ಅರ್ಡರ್ ಅದು. ನಿಮಗೆ ಕೊಡುತ್ತೇನೆ ಎಂದು ಸ್ಟುಡಿಯೋ ಮಾಲೀಕರಲ್ಲಿ ಆಸೆ ಹುಟ್ಟಿಸುತ್ತಿದ್ದ.

ಇದೇ ವೇಳೆ ಸ್ಟುಡಿಯೋದಲ್ಲಿ ಇರುವ ಕ್ಯಾಮಾರ ಇನ್ನಿತರ ಪರಿಕರಗಳ ಮಾಹಿತಿ ಸಂಗ್ರಹಿಸಿ, ಮೊಬೈಲೈ ನಂಬರ್ ಪಡೆದು ಬರುತ್ತಿದ್ದ.

ಮರುದಿನ ಸ್ಟುಡಿಯೋ ಮಾಲೀಕನಿಗೆ ಕರೆ ಮಾಡಿ, ನಿಮ್ಮ ಬಳಿ ಮದುವೆ ಆರ್ಡರ್ ಬಗ್ಗೆ ಮಾತನಾಡುವುದಿದೆ. ಎರಡು ಕಿಲೋಮೀಟರ್ ದೂರದಲ್ಲಿದ್ದೇವೆ, ಬನ್ನಿ ಎಂದು ಕರೆಯುತ್ತಿದ್ದರು.

ಮಾಲೀಕ ತರಾತುರಿಯಲ್ಲಿ ಶೆಟರ್ ಎಳೆದು ಬೀಗ ಹಾಕದೆ ಆರೋಪಿಗಳು ಹೇಳಿದ ಜಾಗಕ್ಕೆ ಓಡಿ ಹೋಗುತ್ತಿದ್ದರು. ಈ ವೇಳೆ ಶೇಖ್ ವ್ಯವಹಾರ ಮಾತನಾಡುವಂತೆ ನಾಟಕವಾಡುತ್ತಿದ್ದ.

ಇತ್ತ ಜಾವೇದ್, ಸ್ಟುಡಿಯೋ ಶೆಟರ್ ತೆಗೆದು, ಕ್ಯಾಮರಾ ಲೆನ್ಸ್ ದೋಚುತ್ತಿದ್ದ.

ಅತ್ತ ಶೇಖ್ ಚೌಕಾಸಿ ಮಾಡಿ ವ್ಯವಹಾರ ಬೇಡ ಎಂದು ತೆರಳುತ್ತಿದ್ದ. ಅಯ್ಯೋ ಕೈಗೆ ಬಂದ ತುತ್ತು ಬಾಯಿಗಿ ಬಂದಿಲ್ಲ ಎಂದು ಮಾಲೀಕ ಸ್ಟುಡಿಯೋ ಕಡೆ ಬಂದರೆ ಇಲ್ಲಿ ತುತ್ತಿನ ಚೀಲ ತುಂಬುವ ಕ್ಯಾಮಾರಗಳು ಅಬೇಸ್ ಆಗಿರುತ್ತಿತ್ತು.

ಇನ್ನು ಸ್ಟುಡಿಯೋ ಮಾಲೀಕರಿಗೆ ಮೊಬೈಲ್ ಕರೆ ಮಾಡಿ ಮಾತನಾಡಲು ಹಲವು ಸಿಮ್ ಗಳನ್ನು ಆರೋಪಿಗಳು ಇಟ್ಟುಕೊಂಡಿದ್ದರು. ತಮ್ಮ ಕೆಲ ಮುಗಿದ ಮೇಲೆ ಸಿಮ್ ಕಾರ್ಡ್ ಸ್ಥಗಿತಿಗೊಳಿಸುತ್ತಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ಇನ್ಸ್ ಪೆಕ್ಟರ್ ತಮ್ಮ ಖಾಕಿ ಬುದ್ದಿ ಓಡಿಸಿದ್ದರು. ಕದ್ದ ಮಾಲು ಸಾಮಾಜಿಕ ಜಾಲತಾಣದಲ್ಲಿ ಬರುತ್ತದೆ ಎಂದು ಕಾದಿದ್ದರು. ನಿರೀಕ್ಷೆ ಸುಳ್ಳಾಗಲಿಲ್ಲ. OLX ನಲ್ಲಿ ಕ್ಯಾಮಾರಗಳನ್ನು ಮಾರಾಟ ಮಾಡಲು ಆರೋಪಿಗಳು ಮುಂದಾಗಿದ್ದಾರೆ. ತಕ್ಷಣ ಗ್ರಾಹಕರ ಸೋಗಿನಲ್ಲಿ ಹೋದ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.

ಇವರಿಬ್ಬರಿಂದ 12 ಕ್ಯಾಮಾರ ಮತ್ತು ಲೆನ್ಸ್ ಜಪ್ತಿ ಮಾಡಲಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: