ಬಡತನದ ಅನುಭವಕ್ಕೆ ಸ್ಲಮ್‌ ಹೋಟೆಲ್‌ -ಅಲ್ ಜಜೀರಾ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು

ಡಚ್‌ ಮೂಲದ NGO ಕಾರ್ಯಕರ್ತನೊಬ್ಬ ಮುಂಬಯಿ ಸ್ಲಮ್‌ನಲ್ಲಿ  ಕಳೆದ ಒಂದು ವರ್ಷದ ಹಿಂದೆ ಸ್ಲಮ್ ಹೋಟೆಲ್ ಎಂಬ ಪ್ರವಾಸೋದ್ಯಮ ಕೇಂದ್ರವನ್ನು ಪ್ರಾರಂಭಿಸಿದ್ದ.

NGO ಕಾರ್ಯಕರ್ತ ಡೇವಿಡ್‌ ಬಿಜಿ ಮುಂಬಯಿನ ಕರ್‌ದಂಡ ಸ್ಲಮ್‌ನಲ್ಲಿ ‘ಸ್ಲಮ್‌ ಹೋಟೆಲ್‌’ ಪ್ರಾರಂಭಿಸಿದಾಗ ಸ್ಲಮ್‌ನಲ್ಲಿರುವ ಕುಟುಂಬಗಳಿಗೆ ಆದಾಯ ತಂದುಕೊಡುವುದು ಮತ್ತು ಸಾಮಾನ್ಯವಾಗಿ ಎಂದೂ ಭೇಟಿಯಾಗದ ಎರಡು ಸಾಮಾಜಿಕ ಗುಂಪುಗಳನ್ನು ಭೇಟಿ ಮಾಡಿಸುವುದು ಅನ್ನುವುದು ಉದ್ದೇಶವಾಗಿತ್ತು.

ಪ್ರವಾಸಿಗರಿಗೆ ಸ್ಲಮ್‌ನ ಜನ ಜೀವನವನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದ ಡೇವಿಡ್ ಇದನ್ನು ಪಾವರ್ಟಿ ಟೂರಿಸಂ ಎಂದು ಕರೆದಿದ್ದ.

ಯೋಜನೆ ಪ್ರಕಾರ ಪ್ರವಾಸಿಗರಿಗೆ ಸ್ಲಮ್‌ನ ಯಾವುದಾದರೊಂದು ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರವಾಸಿಗರು ಸ್ಲಮ್‌ನ ಜನ ಬಳಸುವ ಸಾರ್ವಜನಿಕ ಶೌಚಗೃಹವನ್ನೇ ಬಳಸಬೇಕು. ಸ್ಲಮ್‌ ಹೋಟೆಲ್‌ನಲ್ಲಿ ತಂಗಲು ಪ್ರವಾಸಿಗರಿಗೆ ಒಂದು ರಾತ್ರಿಗೆ ಸುಮಾರು 2,280 ರೂಪಾಯಿ ಪಡೆಯಲಾಗುತ್ತದೆ.

ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಹೋಟೇಲ್ ಮಾಲಿಕ ರವಿ ಸಾನ್ಸಿ ಇದೀಗ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಎಸಿ ಮತ್ತು ಟಿವಿಯನ್ನು ಅಳವಡಿಸಿದ್ದಾರೆ.

ಇದೇ ಸ್ಲಮ್ ಹೋಟೆಲ್ ಬಗ್ಗೆ ಅಲ್‌ ಜಜೀರಾ ಇಂಗ್ಲಿಷ್‌ ಡಾಕ್ಯುಮೆಂಟರಿ ವೀಡಿಯೋ ಒಂದನ್ನು ಪ್ರಸಾರ ಮಾಡಿದೆ. ಇದನ್ನು ಟ್ವೀಟರ್ ನಲ್ಲೂ ಪೋಸ್ಟ್ ಮಾಡಲಾಗಿದೆ.

ಭಾರತದ ಸ್ಲಮ್‌ಗಳ ಪರಿಸ್ಥಿತಿಯನ್ನು ಬದಲಿಸಬಲ್ಲ ಯೋಜನೆ ‘ಸ್ಲಮ್‌ ಹೋಟೆಲ್‌’ ಎಂದು ಬಣ್ಣಿಸಿಈ ವಿಡಿಯೋ ಪೋಸ್ಟ್ ಆಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಕೆಲವು ನೆಟ್ಟಿಗರು ನಾನ್ಸೆನ್ಸ್‌ ಎಂದಿದ್ದಾರೆ. ನಮಗೆ ಸ್ಲಮ್‌ನಲ್ಲಿರುವ ಬಡವರನ್ನು ಅಭಿವೃದ್ಧಿ ಪಡಿಸಬೇಕಿದೆ. ಅವರ ಅಸಹಾಯಕತೆಯ ಜೀವನವನ್ನು ಪ್ರದರ್ಶಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: