Advertisements

ಭಜರಂಗಿಗಳ ಟೆಂಪಲ್ ಟೂರ್ ಗೆ ಜಮೀರಣ್ಣ  SPONSOR

ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಜಮೀರ್ ಅಹಮ್ಮದ್. ಚಾಲಾಕಿ ರಾಜಕಾರಣಿ. ಗಾಳಿ ಬಂದ ಕಡೆ ಬೀಸಿಕೊಳ್ಳುವುದರಲ್ಲಿ ಇವರದ್ದು ಎತ್ತಿದ ಕೈ.

ಒಂದು ಕಾಲದಲ್ಲಿ ಕುಮಾರಸ್ವಾಮಿ ಜೊತೆಗೆ ಒಡ ಹುಟ್ಟಿದ ಸಹೋದರನಂತೆ ಇದ್ದವರು, ಅದೇನಾಯ್ತೋ ಗೊತ್ತಿಲ್ಲ. ಜೆಡಿಎಸ್ ಮನೆ ತೊರೆದು ಕಾಂಗ್ರೆಸ್ ಕಡೆ ಹೆಜ್ಜೆ ಹಾಕಿದರು.

ಬೀದಿ ಬೀದಿಯಲ್ಲಿ ಜಮೀರ್ ಹೇಳಿದ ಮಾತನ್ನು ಈಗ್ಲೂ ದೇವೇಗೌಡರ ಕುಟುಂಬ ಮರೆಯಲು ಸಾಧ್ಯವಿಲ್ಲ. ಆ ರೀತಿ ಜಾಡಿಸಿದ್ದರು. ಆದರೆ ಈಗ ಅವೆಲ್ಲಾ ರಾಜಕೀಯದಲ್ಲಿ ಮಾಮೂಲು, ನಾವಿರುವುದೇ ನಾಟಕವಾಡಲು ಅನ್ನುವಂತೆ ಜೊತೆಯಾಗಿದ್ದಾರೆ.

ಅದರಲ್ಲೂ ಸಮ್ಮಿಶ್ರ ಸರ್ಕಾರ ಬಂದ ಮೇಲೆ ಏನೂ ಆಗಿಲ್ಲ ಅನ್ನುವಂತೆ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಮತ್ತೆ ಕುಚ್ ಕುಚ್ ದೋಸ್ತಿಗಳಾಗಿದ್ದಾರೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಳೆ ಪೀಡಿತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಜಮೀರ್ ಕೊಡುಗೈ ದಾನಿಯಾಗಿ ಹೋಗಿದ್ದರು.ಕೇಳಿದ್ದನ್ನು ಕರುಣಿಸುವ ಕಾಮಧೇನು, ಪ್ರಾರ್ಥಿಸಿದ್ದನ್ನು ಕೊಡುವ ಅಕ್ಷಯ ಪಾತ್ರೆಯಂತೆ ಕಾಣಿಸಿಕೊಂಡಿದ್ದು ಸುಳ್ಳಲ್ಲ.

ಮೊದಲು ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವಿತ್ತು. ಸಂಘಟಕರು ಕೊಟ್ಟ ಬಹುಮಾನ ಕೈಗಿತ್ತು ಸಚಿವರು ಬರಬಹುದಿತ್ತು ಆದರೆ ಹಾಗೇ ಮಾಡಲಿಲ್ಲ. ಇಬ್ಬರು ವಿದ್ಯಾರ್ಥಿಗಳಿಗೆ ತಲಾ 26 ಸಾವಿರ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂಪಾಯಿಯನ್ನು ತನ್ನ ಕೈಯಿಂದಲೇ ನೀಡಿದರು.

ಶಾಲೆ ಆಡಳಿತ ಮಂಡಳಿಯ ಬೇಡಿಕೆಗೆ ಮಣಿದ ಸಚಿವರು 8 ಲಕ್ಷ ವೈಯುಕ್ತಿಕ ಸಹಾಯ ಘೋಷಿಸಿ, ಸಚಿವರು ಸ್ಥಳದಲ್ಲೇ 5 ಲಕ್ಷ ರೂಪಾಯಿ ವಿತರಿಸಿದರು.

Z1

ಅಲ್ಲಿಂದ ಕಾರ್ಯಕ್ರಮ ಮುಗಿಸಿ ಮುಂದೆ ಸಾಗುವ ವೇಳೆ ವಯೋವೃದ್ಧರೊಬ್ಬರು ಎದುರಾಗಿದ್ದಾರೆ. ಸಚಿವರು ಮನಸ್ಸು ಕರಗಿದೆ. ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ. ಅವರು ತಮ್ಮ ಸಂಕಷ್ಟ ಹೇಳುತ್ತಾ ಹೋದ್ರೆ ಜಮೀರ್ ಭಾವುಕರಾಗಿದ್ದಾರೆ. ತಕ್ಷಣ ಅಲ್ಲೇ 50 ಸಾವಿರ ರೂಪಾಯಿ ಕೊಟ್ಟು ಮುಂದೆ ಸಾಗಿದ್ದಾರೆ.

ನಂತರ ಸಮುದಾಯ ಕೇಂದ್ರದಲ್ಲಿ ನಡೆದ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿದ SSF ಸಂಘಟನೆಯ 12 ಮಂದಿ ಸಚಿವರಿಗೆ ಹಜ್ ಯಾತ್ರೆಯ ಕೊಡುಗೆ ಘೋಷಿಸಿದರು.

ಮಾತ್ರವಲ್ಲದೆ ಜೀವದ ಹಂಗು ತೊರೆದು, ಜಾತಿ ಧರ್ಮದ ಬೇಧವಿಲ್ಲದೆ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿದ್ದ ಭಜರಂಗದಳದ ನಾಲ್ವರು ಹಿಂದೂ ಯುವಕರಿಗೂ ಧಾರ್ಮಿಕ ಸ್ಥಳದ ಭೇಟಿ ಭಾಗ್ಯ ನೀಡಿದ್ದಾರೆ.

z2

ನೀವು ದೇಶ ಅಥವಾ ವಿದೇಶದ ಯಾವ ಧಾರ್ಮಿಕ ಕ್ಷೇತ್ರಕ್ಕೆ ಹೋಗಲು ಬಯಸುತ್ತೀರಿ ಹೇಳಿ. ಕುಟುಂಬ ಸಮೇತರಾಗಿ ಹೋಗಿ ಬನ್ನಿ. ಖರ್ಚು ನಾನು ನೋಡಿಕೊಳ್ಳುತ್ತೇನೆ ಅಂದಿದ್ದಾರೆ.

ನಂತರ ಭೋಜನ ಸವಿಯುವ ಸಂದರ್ಭದಲ್ಲಿದೆ ಭಜರಂಗದಳ ಕಾರ್ಯಕರ್ತರಿಗೆ ಕೈ ತುತ್ತು ತಿನ್ನಿಸಿ, ಪ್ರೀತಿಯನ್ನೂ ತೋರಿಸಿದರು.

ಫೇಸ್ ಬುಕ್ ನಲ್ಲಿ ಜಮೀರ್ ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತಿತ್ತು, ಆದರೆ ಈಗ ಅದೇ ಜಮೀರ್ ಇಲ್ಲಿರುವುದೇ ಅನ್ನುವ ಪ್ರಶ್ನೆ ಹಲವರಿಗೆ ಕಾಡಿದ್ದು ಸುಳ್ಳಲ್ಲ.

ಏನಿವೇ..ಜಮೀರ್ ಕಾರ್ಯವನ್ನು ಶ್ಲಾಘಿಸಲೇಬೇಕು. ಹಿಂದೆ ಮಾಡಿರುವ ಭಾಷಣ ಮರೆಯಲು ಸಾಧ್ಯವಿಲ್ಲ. ಹಾಗಂತ ಸುಳ್ಯದಲ್ಲಿ ಮಾಡಿರುವ ಒಳ್ಳೆಯ ಕೆಲಸಕ್ಕೆ ಭೇಷ್ ಅನ್ನದಿರಲು ಸಾಧ್ಯವೇ..?

Advertisements

Leave a Reply

%d bloggers like this: