Advertisements

ತಾಲೀಮು ವೇಳೆ ತೂಕಡಿಕೆ – ಅಂಬಾರಿ ಹೊರುವ ಅರ್ಜನನಿಗೆ ನಿದ್ದೆ ಸಮಸ್ಯೆ  

ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿರುವ ಅರ್ಜುನ ಈಗ ತಾಲೀಮು ವೇಳೆ ನಿಂತಲ್ಲೇ ತೂಕಡಿಸುತ್ತಿದ್ದಾನೆ.

ಕಾಡಿನಲ್ಲಿದ್ದಾಗ ಕಣ್ತುಂಬ ನಿದ್ದೆ ಮಾಡಿಕೊಂಡು ಆರಾಮವಾಗಿದ್ದ ಅರ್ಜುನನಿಗೆ  ನಿದ್ದೆಯ ಸಮಸ್ಯೆ ಕಾಡುತ್ತಿದೆ. ಇವನೊಂದಿಗೆ ಗಜಪಡೆಯ ಇತರ ಆನೆಗಳದ್ದೂ ಇದೇ ಪರಿಸ್ಥಿತಿ.

ರಾತ್ರಿ ಹೊತ್ತು ಜಗಮಗಿಸುವ ವಿದ್ಯುದೀಪಗಳಿಂದ ನಿದ್ದೆ ಮಾಡಲು ಸಾಧ್ಯವಾಗದೆ ಎಚ್ಚರವಾಗಿರುವ ಅರ್ಜುನ, ತಾಲೀಮು ವೇಳೆ ಸೇರಿದಂತೆ ಬೆಳಗಿನ ಅವಧಿಯಲ್ಲಿ ನಿಂತಲ್ಲೇ ಕಣ್ಣು ಮುಚ್ಚಿ ಕೋಳಿ ನಿದ್ದೆ ಮಾಡುತ್ತಿದ್ದಾನೆ.

ಸೆಪ್ಟಂಬರ್ 5 ರಂದು ನಾಗರಹೊಳೆ ಅಭಯಾರಣ್ಯದ ವೀರನಹೊಸಳ್ಳಿಯಿಂದ ಮೈಸೂರಿನ ಅಂಬಾವಿಲಾಸ ಅರಮನೆಯ ಆವರಣಕ್ಕೆ ಬಂದ ಗಜ ಪಡೆ ಕಳೆದ ಒಂದು ತಿಂಗಳಿನಿಂದ ಭರ್ಜರಿ ತಾಲೀಮು ಮಾಡುತ್ತಿದೆ. ಜೊತೆಗೆ ರಾಜಾತಿಥ್ಯ ಬೇರೆ ಸಿಗುತ್ತಿದೆ.

ಭರ್ಜರಿ ಊಟೋಪಾಚಾರದಿಂದ ಸಾಕಷ್ಟು ಸಂತುಷ್ಟವಾಗಿರುವ ಅರ್ಜುನ, ನಿತ್ಯ ತಾಲೀಮು ನಡೆಸುತ್ತಿದ್ದು, ಬುಧವಾರದಿಂದ ಮರದ ಅಂಬಾರಿಯನ್ನು ಹೊರಿಸುವ ಮೂಲಕ ತಾಲೀಮು ಪ್ರಾರಂಭವಾಗಲಿದೆ.

ಈ ವೇಳೆ ಅರ್ಜುನ ನಿಂತಲ್ಲೇ ಕಣ್ಮುಚ್ಚಿಕೊಂಡು ತೂಕಡಿಸುತ್ತಿರುವುದು ಸಾಮಾನ್ಯವಾಗಿದೆ. ಕಾಡಿನಲ್ಲಿದ್ದಾಗ ರಾತ್ರಿಯ ಕತ್ತಲಲ್ಲಿ ಕಣ್ತುಂಬ ನಿದ್ದೆ ಮಾಡುತ್ತಿದ್ದ ಅರ್ಜುನ ಸೇರಿದಂತೆ ಅರಮನೆ ಆವರಣದಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವುದಕ್ಕೆ ಇನ್ನಷ್ಟು ಸಮಯ ಬೇಕಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶು ವೈದ್ಯರು ಹಾಗೂ ವನ್ಯ ಜೀವಿ ತಜ್ಞರು, ‘ಕಾಡಾನೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವ ಪ್ರಾಣಿ. ಸಾಮಾನ್ಯವಾಗಿ ಓಡಾಡುತ್ತಲೇ ಇರುತ್ತವೆ. ದಿನದಲ್ಲಿ ಒಂದೆರಡು ಗಂಟೆ ಮಲಗುವ ಅಭ್ಯಾಸ ಹೊಂದಿರುತ್ತದೆ. ಜೊತೆಗೆ ನಿಂತಲ್ಲೇ ನಿದ್ರಿಸುತ್ತವೆ. ಸಾಕಾನೆಗಳು ಅರಮನೆಯಲ್ಲಿ ತಾತ್ಕಾಲಿಕವಾಗಿ ಇರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆಗಾಗ್ಗೆ ನಿಂತಲ್ಲೇ ನಿದ್ರಿಸುವುದು ಸಾಮಾನ್ಯ. ಇದರಿಂದ ಯಾವುದೇ ತೊಂದರೆಯಿಲ್ಲ ಅಂದಿದ್ದಾರೆ.

Advertisements

Leave a Reply

%d bloggers like this: