ಸನ್ನಿಧಿಯಲ್ಲಿ 500 ಮಹಿಳಾ ಪೊಲೀಸ್ ನೇಮಕ : ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಹಲವರ ನಕಾರ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್‌ ಆದೇಶ ಇದೀಗ ಬಿಸಿ ತುಪ್ಪವಾಗಿದೆ.

ಬಿಜೆಪಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಹಿಳೆಯರನ್ನು ತಡೆಯುವ ಯೋಚನೆಯಲ್ಲಿದೆ. ಮತ್ತೊಂದು ಕಡೆ ಪಂದಳ ರಾಜವಂಶ ಬೃಹತ್ ಪ್ರತಿಭಟನೆಯನ್ನೂ ಕೂಡಾ ನಡೆಸಿದೆ. ರಾಜ್ಯದ ಬಹುತೇಕ ಮಹಿಳೆಯರು ಶಬರಿಮಲೆಗೆ ಮಹಿಳೆಯರು ಬೇಡ ಅನ್ನುತ್ತಿದ್ದಾರೆ. ಒಂದೆಡೆ ರಾಜ್ಯದ ಬಹುಜನರ ಭಾವನೆಗಳನ್ನು ಗೌರವಿಸಬೇಕು, ತಪ್ಪಿದರೆ ಮುಂದಿನ ಚುನಾವಣೆಯನ್ನು ಎಡಪಕ್ಷವನ್ನು ಜನ ಮನೆಗೆ ಕಳುಹಿಸಿ ಬಿಡುತ್ತಾರೆ.

ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯ ಭೀತಿ. ಹೀಗಾಗಿ ತೀರ್ಪು ಪಾಲಿಸುವ ನಿರ್ಧಾರಕ್ಕೆ ಕೇರಳ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು 500 ಮಹಿಳಾ ಪೊಲೀಸರನ್ನು ನಿಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಮಧ್ಯೆ, ಗುಪ್ತಚರ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ರವಾನಿಸಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕೆಲಸಕ್ಕೆ ಹಾಜರಾಗಲು ಹಲವು ಮಹಿಳಾ ಪೊಲೀಸರು ನಿರಾಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲಿ ದೇವರ ಕೋಪಕ್ಕೆ ತುತ್ತಾಗುತ್ತೇವೋ ಅನ್ನುವ ಆತಂಕ ಅವರದ್ದು ಎಂದು ವರದಿ ಹೇಳಿದೆ.

ಆದರೆ ಧರ್ಮ ಮತ್ತು ರಾಜಕೀಯದ ಹೊರತಾಗಿಯೂ ಎಲ್ಲರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಕೇರಳ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹ್ರಾ ಅವರು ಹೇಳಿದ್ದಾರೆ

ಮಹಿಳಾ ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಲು ಈ ತಿಂಗಳಲ್ಲಿ ಶಬರಿಮಲೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಿಸುತ್ತೇವೆ. ನಮ್ಮದು ಕಾನೂನು ಜಾರಿಗೊಳಿಸುವ ಸಂಸ್ಥೆ. ಹೀಗಾಗಿ ಇಲ್ಲಿ ಲಿಂಗ, ಧರ್ಮ, ರಾಜಕೀಯದ ಪ್ರಶ್ನೆ ಬರುವುದಿಲ್ಲ. ಎಲ್ಲರೂ ಅವರವರ ಕರ್ತವ್ಯ ನಿರ್ವಹಿಸಬೇಕು ಎಂದು ಬೆಹ್ರಾ ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿ ನೋಡುವುದಾದರೆ ನಿಜವಾದ ಭಕ್ತಿ ಇರುವ ಮಂದಿ ನಿಯಮ, ನಿಷ್ಠೆಯನ್ನು ಮೀರಿ ಶಬರಿಮಲೆ ಮೆಟ್ಟಿಲು ಹತ್ತುವ ಸಾಧ್ಯತೆಗಳು ಕಡಿಮೆ. ಹಠಕ್ಕೆ ಬಿದ್ದು ಹತ್ತುವವರ ಸಂಖ್ಯೆ ಹೆಚ್ಚು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: