Advertisements

ಗರ್ಭಿಣಿ ರಾಧಿಕಾ ಬಯಕೆಯೇನು…?

ಗರ್ಭಿಣಿಯರಿಗೆ ಬಯಕೆಗಳಿರುತ್ತವೆ. ಹಾಗೇ ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್ ಕೂಡ ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಾರೆ. ಹಾಗಂತ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಅನ್ನುವ ಬಯಕೆಯಲ್ಲ. ಮಾತ್ರವಲ್ಲದೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ತೀರಿಸಬಹುದಾದ ಬಯಕೆಯೂ ಅಲ್ಲ.

ಹಾಗಾದರೆ ಅದೇನು ಅಂತೀರಾ ರಾಕಿಂಗ್ ಸ್ಟಾರ್ ಯಶ್ ಜೊತೆ ಒಂದು ಸಿನಿಮಾ ಮಾಡಬೇಕು ಅನ್ನುವುದೇ ಅವರ ಬಯಕೆ.

ಗರ್ಭಿಣಿ ಆರೈಕೆಯಲ್ಲಿರುವ ರಾಧಿಕಾ, ಪತಿ ಯಶ್ ಜೊತೆಗೆ ಪುರಾಣ ಆಧಾರಿತ ಸಿನಿಮಾವನ್ನು ಮಾಡಬೇಕು ಎಂಬ ಕನಸು ಇದೆ ಎಂದು ಹೇಳಿಕೊಂಡಿದ್ದಾರೆ.

ಯಶ್ ಮದುವೆಗೂ ಮೊದಲು ನಾವಿಬ್ಬರು ಒಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿ ಅಭಿನಯಿಸಿದ್ದೇವೆ. ಆಗಲೇ ನಾವು ಪುರಾಣ ಆಧಾರಿತ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಚರ್ಚಿಸಿದ್ದೇವು. ಅಂತಹ 10 ಚಿತ್ರಗಳ ಕತೆಗಳು ನಮ್ಮೆದುರು ಬಂದಿತ್ತು. ಆದರೆ ಇಬ್ಬರಿಗೂ ಕೆಲವು ಕತೆ ಇಷ್ಟವಾಗದ ಕಾರಣ ಮಾಡಲಾಗಲಿಲ್ಲ.

ಇನ್ನು ರಾಧಿಕಾರ ಬಯಕೆ ಕುರಿತಂತೆ ಮಾತನಾಡಿರುವ ಯಶ್ , ಅಭಿಮಾನಿಗಳು ಮದುವೆಯ ನಂತರ ನಮ್ಮಿಬ್ಬರ ಜೋಡಿಯ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಯಾರಾದರೂ ನಿರ್ದೇಶಕರು ಕಥೆಯೊಂದಿಗೆ ಬಂದರೆ ಖಂಡಿತ ಸಿನಿಮಾವನ್ನು ಮಾಡುತ್ತೇವೆ ಎಂದಿದ್ದಾರೆ.

Advertisements

Leave a Reply

%d bloggers like this: