Advertisements

ರಶ್ಮಿಕಾ ರಕ್ಷಿತ್ ಬ್ರೇಕ್ ಅಪ್ ಬಗ್ಗೆ ದೇವರಕೊಂಡ ಹೇಳಿದ್ದೇನು…?

ಚಂದನವನದ  ಚೆಂದದ ಜೋಡಿ ಎಂದೇ ಹೆಸರಾಗಿದ್ದ ರಕ್ಷಿತ್-ರಶ್ಮಿಕಾ ಲವ್, ನಿಶ್ಚಿತಾರ್ಥಕ್ಕಿಂತ ಸುದ್ದಿ ಮಾಡಿದ್ದು ಅವರಿಬ್ಬರ ಬ್ರೇಕಪ್ ವಿಷಯ.

ವಿಜಯ್ ದೇವರಕೊಂಡ ಜೊತೆಗಿನ ನಟನೆಯ ‘ಗೀತ ಗೋವಿಂದ’ದಲ್ಲಿ ಲಿಪ್ ಲಾಕ್ ಮಾಡಿದ್ದು ಕೂಡ ರಶ್ಮಿಕಾ-ರಕ್ಷಿತ್ ಸಂಬಂಧ ಮುರಿಯಲು ಒಂದು ಕಾರಣ ಎನ್ನಲಾಗಿತ್ತು. ಅದರ ಜೊತೆಗೆ ಹುಟ್ಟಿಕೊಂಡ ಗಾಸಿಪ್ ಗಳಿಗೂ ಲೆಕ್ಕವಿರಲಿಲ್ಲ.

ಇದೀಗ ಮೊದಲ ಬಾರಿಗೆ ತೆಲುಗು ನಟ ವಿಜಯ್ ದೇವರಕೊಂಡ ಬ್ರೇಕಪ್ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಅವರಿಬ್ಬರ ಸಂಬಂಧದಲ್ಲಿನ ಬಿರುಕಿಗೆ ನಾನು ಕಾರಣನಲ್ಲ ಅಂದಿದ್ದಾರೆ.

ಈ ಕುರಿತು ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟ ವಿಜಯ್ ದೇವರಕೊಂಡ ಮಾತನಾಡಿದ್ದು, ಅವರಿಬ್ಬರ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರಿಬ್ಬರ ಬಗ್ಗೆ ನನಗೆ ಗೌರವವಿದೆ ಅಂದಿದ್ದಾರೆ.

ರಕ್ಷಿತ್ ಅವರ ಶ್ರೀಮನ್ನಾರಾಯಣ ಚಿತ್ರದ ಟೀಸರ್ ನೋಡಿದೆ. ಅವರ ನಟನೆ ನನಗೆ ಬಹಳ ಇಷ್ಟ ಆಯಿತು. ಅವರ ಕೆಲಸ ನನಗೆ ಬಹಳಷ್ಟು ಇಷ್ಟ ಎಂದಿದ್ದಾರೆ.

Advertisements

One Comment on “ರಶ್ಮಿಕಾ ರಕ್ಷಿತ್ ಬ್ರೇಕ್ ಅಪ್ ಬಗ್ಗೆ ದೇವರಕೊಂಡ ಹೇಳಿದ್ದೇನು…?

  1. Pingback: ನಾಯಕನೊಂದಿಗೆ ಲಿಪ್ ಲಾಕ್ ಮಾಡಿದ ಪ್ರಿಯಾ ವಾರಿಯರ್ – torrentspree

Leave a Reply

%d bloggers like this: