ರಮ್ಯ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನುವುದು ದೊಡ್ಡ ಸುದ್ದಿಯಾಗಿದೆ.
ಹಾಗೇ ನೋಡುವುದಾದರೆ ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ ರಮ್ಯ ಎಡವಟ್ಟು ಟ್ವೀಟ್ ಗಳ ಮೂಲಕ ಸುದ್ದಿಯಾಗಿದ್ದರು. ಹೀಗಾಗಿ ರಮ್ಯ ರಾಜೀನಾಮೆ ಬ್ರೇಕಿಂಗ್ ನ್ಯೂಸ್ ಆಗಿದೆ.
ರಮ್ಯರನ್ನು ಕೆಲಸದಿಂದ ಕಿತ್ತು ಹಾಕಿದ್ರಂತೆ ರಾಹುಲ್…!
ಈ ನಡುವೆ ರಾಜೀನಾಮೆ ಸುದ್ದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಮ್ಯ “ನಾನು ರಾಜೀನಾಮೆ ಕೊಟ್ಟಿಲ್ಲ. ನನ್ನ ಟ್ವಿಟರ್ ಖಾತೆಯಲ್ಲಿ ಕೆಲವೊಂದು ಸಮಸ್ಯೆ ಇದೆ. ಹೀಗಾಗಿ ಹುದ್ದೆಯ ವಿವರ ಕಾಣಿಸುತ್ತಿಲ್ಲ. ಜೊತೆಗೆ ನಾಲ್ಕೈದು ದಿನ ರಜೆಯಲ್ಲಿದ್ದ ಕಾರಣ ಕಚೇರಿಗೆ ಹೋಗಿಲ್ಲ. ನಾಳೆಯಿಂದ ಮತ್ತೆ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಅಂದಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಿಲ್ಲ – ಇದು ರಮ್ಯ ಮದರ್ ಸ್ಟೇಟ್ ಮೆಂಟ್
ಆದರೆ ಇದನ್ನು ಎಷ್ಟರ ಮಟ್ಟಿಗೆ ನಂಬಬಹುದು ಅನ್ನುವುದು ಯಕ್ಷ ಪ್ರಶ್ನೆ. ಒಂದೆರೆಡು ದಿನದಲ್ಲಿ ಈ ಬಗ್ಗೆ ಕ್ಲಿಯರ್ ಫಿಕ್ಚರ್ ಸಿಗುವ ಸಾಧ್ಯತೆಗಳಿದೆ.