ಈ ಚಿತ್ರದ ರೂಪದರ್ಶಿ ಇನ್ನಿಲ್ಲ – 102 ವರ್ಷಗಳ ಕಾಲ ಬದುಕಿದ್ದ ಗೀತಾ ಕೃಷ್ಣಕಾಂತ್ ಉಪ್ಲೇಕರ್

ಮೈಸೂರಿನ ಜಗನ್ಮೋಹನ ಅರಮನೆಯ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ‘ ಗ್ಲೋ ಆಫ್‌ ಹೋಪ್’ ಕಲಾಕೃತಿಯನ್ನು ಮೊದ ಮೊದಲು ರವಿವರ್ಮ ರಚಿಸಿದ್ದ ಎಂದು ಎಲ್ಲರೂ ನಂಬಿದ್ದರು. ಆದರೆ ಬಳಿ ಗೊತ್ತಾಗಿದ್ದು ಇದು ಎಸ್.ಎಲ್.ಹಲ್ದಂಕರ್ ರಚಿಸಿದ ಕೃತಿ ಎಂದು.

ಈ ಚಿತ್ರದಲ್ಲಿರುವ ಬಾಲೆ ಗೀತಾ ಕೃಷ್ಣಕಾಂತ್ ಉಪ್ಲೇಕರ್ ತಮ್ಮ 102ನೇ ವಯಸ್ಸಿನಲ್ಲಿ ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾದರು.

geeta upalekar

ಗೀತಾ ಕೃಷ್ಣಕಾಂತ್ ಉಪ್ಲೇಕರ್ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಗಳಿಂದ ಅಸ್ವಸ್ಥರಾಗಿದ್ದರು. ಗೀತಾ ಅವರು ಹಿಂದೂಸ್ತಾನಿ ಸಂಗೀತದ ಗಾಯಕಿಯೂ ಆಗಿದ್ದರು. ಅವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.

ಚಿತ್ರದಲ್ಲಿರುವ ಗೀತಾ ಉಪ್ಲೇಕರ್ ಅವರ ಮೂರನೇ ಪುತ್ರಿಯಾಗಿದ್ದಾರೆ. ಆಭರಣ ತಯಾರಕ  ಕೃಷ್ಣಕಾಂತ್ ಉಪ್ಕರ್ ಅವರೊಡನೆ ವಿವಾಹವಾದಂದಿನಿಂದ ಕೊಲ್ಹಾಪುರದಲ್ಲಿ ವಾಸವಾಗಿದ್ದರು.

ದೀಪ ಹಿಡಿದಿರುವ ಬಾಲೆ ಕಲಾಕೃತಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದು ಎಂದು ಕರೆಸಿಕೊಂಡಿದೆ.

ಈ ಕಲಾಕೃತಿಯ ವಿಶೇಷವೆಂದರೆ ಕಲಾವಿದ ಸಾವ್ಲಾರಾಂ ಲಕ್ಷ್ಮಣ್ ಹಲ್ದಂಕರ್ ಅವರು ತಮ್ಮ ಪುತ್ರಿ ಗೀತಾ ಉಪ್ಲೇಕರ್ ಅವರನ್ನೆ ಈ ಕಲಾಕೃತಿಯಲ್ಲಿ ಚಿತ್ರಿಸಿದ್ದಾರೆ.

geeta upalekar1

ದೀಪ ಹಿಡಿದಿರುವ ಗೀತಾ ಅವರಿಗೆ 12 ವರ್ಷ ವಯಸ್ಸಾಗಿದ್ದಾಗ ಹಲ್ದಂಕರ್ ಈ ಕಲಾಕೃತಿಯನ್ನು ರಚಿಸಿದ್ದಾರೆ. ಹಲ್ದಂಕರ್ ಮಹಾರಾಷ್ಟ್ರದ ಸಾವಂತವಾಡಿ ಪ್ರದೇಶದವರು. ಅಂದು ದೀಪಾವಳಿಯ ದಿನದ ಸಂಜೆ. ಹಲ್ದಂಕರ್ ತಮ್ಮ ಮಗಳು ಗೀತಾ ಕಂಚಿನ ದೀಪವನ್ನು ಕೈಯಲ್ಲಿ ಹಿಡಿದು ಗಾಳಿಗೆ ಅದು ನಂದಿ ಹೋಗದಂತೆ ಕೈಯನ್ನು ಅಡ್ಡ ಹಿಡಿದುಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿದ್ದುದ್ದನ್ನು ಕಂಡರು. ತಕ್ಷಣವೇ ಅವರಲ್ಲಿದ್ದ ಕಲಾವಿದ ಜಾಗೃತಗೊಂಡ. ತಮ್ಮ ಚಿತ್ರಕಲೆಯಲ್ಲಿ ಮೂಡಿಸಿದರು.

ತಮ್ಮ ತಂದೆ ಈ ಕಲಾಕೃತಿಯನ್ನು ರಚಿಸಲು ಗೀತಾ ಮೂರು ತಾಸುಗಳ ಕಾಲ ದೀಪವನ್ನು ಕೈಯಲ್ಲಿ ಹಿಡಿದು ನಿಂತಿದ್ದರು. ನಂತರದಲ್ಲಿ ಹಲ್ದಂಕರ್ ಈ ಕಲಾಕೃತಿಗೆ ಮೂರು ದಿನಗಳಲ್ಲಿ ಅಂತಿಮ ರೂಪ ನೀಡಿದ್ದರು.

1945-46ರಲ್ಲಿ ಕೊಲ್ಹಾಪುರದಲ್ಲಿರುವ ಗೀತಾ ಉಪ್ಲೇಕರ್ ನಿವಾಸದಲ್ಲಿ ದೀಪಾವಳಿ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಗಳು ಗೀತಾ ದೀಪವನ್ನು ಹಿಡಿದುಕೊಂಡು ಬರುತ್ತಿರುವುದನ್ನು ನೋಡಿದ ಹಲ್ದಾಂಕರ್​ಗೆ ಕಲಾಕೃತಿ ರಚನೆಯ ಯೋಜನೆ ಹೊಳೆದಿತ್ತು. ಮಗಳನ್ನು ಈ ಬಗ್ಗೆ ಕೇಳಿದ್ದರು. ನಂತರದ ಮೂರು ದಿನಗಳಲ್ಲಿ ಕಲಾಕೃತಿ ರಚನೆ ಮುಗಿದಿತ್ತು. ತಂದೆ ಚಿತ್ರ ಬಿಡಿಸುವ ಸಮಯದಲ್ಲಿ ಉಪ್ಲೇಕರ್ ದೀಪ ಹಿಡಿದುಕೊಂಡು ಒಂದೇ ಭಂಗಿಯಲ್ಲಿ ಮೂರರಿಂದ ನಾಲ್ಕು ಗಂಟೆ ನಿಲ್ಲುತ್ತಿದ್ದರು ಎಂದು ಈಗ್ಲೂ ಅವರ ಕುಟುಂಬಸ್ಥರು ನೆನಪಿಸಿಕೊಳ್ಳುತ್ತಾರೆ.

ಕೆಲವು ದಿನಗಳ ನಂತರ ಮೈಸೂರು ಮಹಾರಾಜರ ಸಂಸ್ಥಾನದಲ್ಲಿ ದಸರಾ ಉತ್ಸವದ ಅಂಗವಾಗಿ ನಡೆದ ಚಿತ್ರಕಲಾ ವಸ್ತುಪ್ರದರ್ಶನಕ್ಕೆ ಹಲ್ದಂಕರ್ ಕಲಾಕೃತಿಯನ್ನು ತಂದು ಪ್ರದರ್ಶಿಸಿದರು. ಹಲ್ದಂಕರ್ ಅವರ ಈ ಕಲಾಕೃತಿ ಪ್ರಥಮ ಸ್ಥಾನ ಪಡೆಯಿತು.

ಅಂದಿನ ಮೈಸೂರು ಮಹಾರಾಜರು ಈ ಕಲಾಕೃತಿಯನ್ನು 300 ರೂಪಾಯಿ ಕೊಟ್ಟು ಖರೀದಿಸಿ, ಅರಮನೆಯಲ್ಲಿ ಇಟ್ಟರು. ಅನಂತರ ಈ ಕಲಾಕೃತಿಯು ಜಗನ್ಮೋಹನ  ಅರಮನೆ ಆವರಣದಲ್ಲಿರುವ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ಸ್ಥಾನ ಪಡೆಯಿತು.

ಇತ್ತೀಚೆಗಷ್ಟೇ ಫ್ರಾನ್ಸ್​ನಿಂದ 8 ಕೋಟಿ ರೂಪಾಯಿಗಳಿಗೆ ಕಲಾಕೃತಿ ಖರೀದಿಗೆ ಬೇಡಿಕೆ ಬಂದಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: