ಅವಳು ಯಾವ ನಿರ್ಮಾಪಕರ ಜೊತೆ ಮಲಗಿದ್ದಾಳೆ ಅನ್ನೋ ಕುರಿತು ನನ್ನ ಬಳಿ ದಾಖಲೆಗಳಿವೆ

ಕರಿಚಿರತೆ ಖ್ಯಾತಿಯ ದುನಿಯಾ ವಿಜಯ್ ಪತ್ನಿಯರ ಬೀದಿ ಜಗಳ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ, ಸೆಲೆಬ್ರೆಟಿ ಪಟ್ಟದಲ್ಲಿರುವ ದುನಿಯಾ ವಿಜಯ್ ಈ ಜಗಳಕ್ಕೆ ಬ್ರೇಕ್ ಹಾಕಬೇಕು. ಅದು ಅವರ ಜವಾಬ್ದಾರಿ ಕೂಡಾ.

ಕುಟುಂಬದ ಹಿರಿಯನ್ನು ಕೂರಿಸಿ ಮಾತನಾಡಿದರೆ ಸಂಸಾರದ ಜಗಳ ಇತ್ಯರ್ಥವಾಗಲು ಕೆಲ ಕ್ಷಣಗಳು ಸಾಕು. ಆದರೆ ವಿಜಿ ಅದ್ಯಾಕೋ ಸುದ್ದಿಯಲ್ಲಿರಬೇಕು ಎಂದು ಬಯಸಿದಂತಿದೆ.

ಇಂದು ಸುದ್ದಿಗೋಷ್ಟಿ ನಡೆಸಿದ,ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ದುನಿಯಾ ವಿಜಿ ತಾವು ಮದುವೆಯಾಗಿರುವುದಾಗಿ ಹೇಳುತ್ತಿರುವ ಕೀರ್ತಿಗೌಡ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಆಕೆ ಸ್ಲಂನಲ್ಲಿದ್ದವಳು ಎಂದು ಪ್ರಾರಂಭಿಸಿದ ನಾಗರತ್ನ, ಕೀರ್ತಿಗೌಡ ಅವರಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ. ಅವಳು ಯಾವ ನಿರ್ಮಾಪಕರ ಜೊತೆ ಮಲಗಿದ್ದಾಳೆ ಅನ್ನುವುದರ ಕುರಿತು ನನ್ನ ಬಳಿ ದಾಖಲೆಗಳಿವೆ. ಕೀರ್ತಿಗೌಡ ಅನೈತಿಕ ಸಂಬಂಧಗಳ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು.

ನನ್ನ ಮಕ್ಕಳಿಗೊಸ್ಕರ ನಾನು ಎಲ್ಲವನ್ನು ಇಷ್ಟು ವರ್ಷ ಸಹಿಸಿಕೊಂಡು ಮೌನವಾಗಿದ್ದೆ. ನನ್ನ ಮಕ್ಕಳ ಭವಿಷ್ಯ ನನಗೆ ಮುಖ್ಯ. ನಮ್ಮ ಸಂಸಾರದ ವಿಷಯ ಬೀದಿಗೆ ಬರಲು ಕೀರ್ತಿಗೌಡ ಕಾರಣ. ನಾನು ವಿಜಿಗೆ ವಿಚ್ಛೇದನ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ವಿಚ್ಛೇದನ ನೀಡಿರುವ ಕುರಿತು ಅವಳು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಆಸ್ತಿ, ಪಾಸ್ತಿಗೋಸ್ಕರ ನಾನು ದುನಿಯಾ ವಿಜಯ್ ಹಿಂದೆ ಬಿದ್ದಿರುವುದಾಗಿ ಹೇಳುತ್ತಿದ್ದಾರೆ. ಯಾರು ದುಡ್ಡಿಗಾಗಿ ವಿಜಿ ಹಿಂದೆ ಬಿದ್ದಿದ್ದಾರೆ ಅಂತ ನನ್ನ ಗಂಡ ವಿಜಿಗೆ ಶೀಘ್ರದಲ್ಲೇ ತಿಳಿಯುತ್ತದೆ. ಆಗ ಅವರೇ ತಾನಾಗಿ ನನ್ನ ಬಳಿಗೆ ಬರುತ್ತಾರೆ ಅನ್ನುವ ನಂಬಿಕೆ ನನಗಿದೆ ಎಂದು ಹೇಳಿದರು.

ಇನ್ನು ಮಕ್ಕಳಿಗೆ ಆಸ್ತಿ ಬರೆದಿರುವ ಕುರಿತಂತೆ ಮಾತನಾಡಿದ ನಾಗರತ್ನ, ಮಕ್ಕಳಿಗೆ ಯಾವುದೇ ಆಸ್ತಿಯನ್ನು ವಿಜಿ ಬರೆದಿಟ್ಟುಕೊಟ್ಟಿಲ್ಲ. ಕೊಟ್ಟಿದ್ದರೆ ಸಾಕ್ಷಿ ಬಹಿರಂಗಪಡಿಸಲಿ. ಬರೀ ಸುಳ್ಳು ಹೇಳುತ್ತಿದ್ದಾರೆ. ವಿಜಿಗೆ ಈ ಹಿಂದೆ ನಾಲ್ಕೈದು ಮನೆಗಳಿತ್ತು ಅವೆಲ್ಲಾ ಏನಾಯ್ತು ಎಂದು ನಾಗರತ್ನ ಪ್ರಶ್ನಿಸಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: