Advertisements

ವೀಕೆಂಡ್ ಮಸ್ತಿಗೆ ವೇಶ್ಯೆಯೊಂದಿಗೆ ಮನೆ ಸೇರಿದವನು ಕಳೆದುಕೊಂಡಿದ್ದು  2 ಲಕ್ಷ ಬೆಲೆಯ ಚೈನು

ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಯುವಕನೊಬ್ಬ ಕಳೆದ ಶನಿವಾರ ರಾತ್ರಿ ವೇಶ್ಯೆಯೊಬ್ಬಳನ್ನು ತನ್ನ ಕೋಣೆಗೆ ಬರಮಾಡಿಕೊಂಡಿದ್ದ. ಮೊದಲೇ ಮಾತಾಡಿಕೊಂಡಂತೆ ಆಕೆಯನ್ನು ಗುಂಜೂರು ರಸ್ತೆಯಲ್ಲಿ ತನ್ನ ಗಾಡಿಯಲ್ಲಿ ಹತ್ತಿಸಿಕೊಂಡು ವರ್ತೂರಿನಲ್ಲಿರುವ ಗುಂಜೂರು ಪಾಳ್ಯದಲ್ಲಿರುವ ಫ್ಲಾಟ್ ಗೆ ಕರೆದುಕೊಂಡು ಹೋಗಿದ್ದ.

ಶನಿವಾರ ರಾತ್ರಿ 9.30ರ ಸುಮಾರಿಗೆ ಇಬ್ಬರೂ ಫ್ಲಾಟ್ ಸೇರಿದ್ದಾರೆ. ರಾತ್ರಿ ಕೆಲ ಹೊತ್ತಿನವರೆಗೆ ಇಬ್ಬರೂ ಚೆನ್ನಾಗಿ ಮದ್ಯ ಸೇವಿಸಿದ್ದಾರೆ. ಯುವಕನಿಗೆ ಅಧಿಕ ಮದ್ಯ ಸೇವಿಸಿದ್ದರಿಂದ ಮಂಪರು ಬಂದು ನಿದ್ದೆಗೆ ಜಾರಿದ್ದ. ಎಚ್ಚರವಾದಾಗ ಮಧ್ಯರಾತ್ರಿ 2 ಗಂಟೆ. ಎದ್ದು ನೋಡಿದಾಗ ಅಲ್ಲಿ ಮಹಿಳೆ ಇರಲಿಲ್ಲ. ಎದ್ದು ಸುತ್ತಮುತ್ತ ನೋಡಿದಾಗ ಆಕೆ ಪರಾರಿಯಾಗಿದ್ದಾಳೆ ಎಂದು ಗೊತ್ತಾಯಿತು.

ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಯುವಕನ ಕುತ್ತಿಗೆಯಲ್ಲಿದ್ದ 2 ಲಕ್ಷ ಬೆಲೆಬಾಳುವ 55 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಳು. ಈ ಬಗ್ಗೆ ಯುವಕ ಭಾನುವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಆರಂಭದಲ್ಲಿ ಕಳವು ಹೇಗಾಯಿತು ಎಂದು ಯುವಕ ಹೇಳಲು ನಿರಾಕರಿಸಿದನಂತೆ. ಕೊನೆಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ಒಪ್ಪಿಕೊಂಡಿದ್ದಾನೆ. ಈಗ ಆಕೆಯ ದೂರವಾಣಿ ಸಂಖ್ಯೆ ಬಿಟ್ಟರೆ ಮತ್ತೇನೂ ಆತನಲ್ಲಿ ಆಕೆಯ ಬಗ್ಗೆ ವಿವರಗಳಿಲ್ಲ.

ಪೊಲೀಸರು ಸೆಕ್ಷನ್ 380ರಡಿಯಲ್ಲಿ ಕೇಸು ದಾಖಲಿಸಿ ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಯುವಕರೇ ಎಸ್ಕಾರ್ಟ್ ಸರ್ವಿಸ್ ನಲ್ಲಿ ಪ್ರಕಟವಾದ ಜಾಹಿರಾತು ನೋಡಿ ಮೋಜು ಮಸ್ತಿ ಎಂದು ಕನಸು ಕಾಣುವ ಮುನ್ನ ಈ ಸುದ್ದಿಯನ್ನು ನೆನಪಿಟ್ಟುಕೊಳ್ಳಿ. ಮಾಂಸ ದಂಧೆಯ ವ್ಯವಹಾರದ ಆಸೆಗೆ ಬಿದ್ರೆ ಮುಂದೇನಾಗಬಹುದು ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ.

ಆನ್ ಲೈನ್ ಮೂಲಕ ಎಸ್ಕಾರ್ಟ್ ಸರ್ವಿಸ್ ನಡೆಸುತ್ತಿರುವವರ ಸಂಖ್ಯೆ ಬೆಂಗಳೂರಿನಲ್ಲಿ ಸಾಕಷ್ಟಿದೆ. ಮಸಾಜ್ ಪಾರ್ಲರ್ ಗಳು ನಾಯಿ ಕೊಡೆಗಳಂತಿವೆ. ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡರೆ ಎಲ್ಲಾ ಸರಿಯಾಗುತ್ತದೆ. ಇಲ್ಲವಾದರೆ ಸಿಎಂ ಕುಮಾರಸ್ವಾಮಿಯವರ ಜನತಾದರ್ಶನವೇ ಗತಿ.

Advertisements

Leave a Reply

%d bloggers like this: