Advertisements

ಮಗನ ಸಾವಿಗೆ ನ್ಯಾಯ ಸಿಗದೆ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ತಂದೆ

ಮಗನ ಕೊಲೆ ಪ್ರಕರಣವನ್ನು ಸ್ವಾಭಾವಿಕ ಸಾವು ಎಂದು ದಾಖಲಿಸಿದ ಪೊಲೀಸರ ವರ್ತನೆಯಿಂದ ಮನನೊಂದ ತಂದೆಯೊಬ್ಬ ತನ್ನ ಕುಟುಂಬದ ಸದಸ್ಯರೊಂದಿಗೆ ಮುಸ್ಲಿಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಉತ್ತರ ಪ್ರದೇಶದ ಭದ್ರಕಾ ಗ್ರಾಮದ ನಿವಾಸಿಯಾದ ಅಖ್ತರ್ ಸೋಮವಾರ ತನ್ನ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

Hindus1

ಈ ಸಂಬಂಧ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ, ಜೊತೆಗೆ ತಾವು ಸ್ವ ಇಚ್ಚೆಯಿಂದ ಮತಾಂತರಗೊಂಡಿರುವುದಾಗಿ ತಿಳಿಸಿದ್ದಾರೆ.

ಪೊಲೀಸರು ತಮ್ಮ ಮಗನ ಸಾವಿನ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅಖ್ತರ್ ಪುತ್ರ ಸಾವನ್ನಪ್ಪಿದ್ದ, ಆದರೆ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ, ಅಕ್ತರ್ ಪುತ್ರ ಗುಲ್ಷನ್ ಕೊಲೆಯಾಗಿತ್ತು, ಆದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು.

Hindus3

ಈ ಸಂಬಂಧ ತಮಗೆ ಸಹಾಯ ಮಾಡುವಂತೆ ತಮ್ಮ ಸಮುದಾಯದವರನ್ನು ಕೇಳಿದ್ದರು. ಆದರೆ ಯಾರೋಬ್ಬರು ಅವರ ಸಹಾಯಕ್ಕೆ ಬರಲಿಲ್ಲ, ಹೀಗಾಗಿ ಅಕ್ತರ್ ಕುಟುಂಬಸ್ಥರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ.

ಯುವ ಹಿಂದೂ ವಾಹಿನಿ ಭಾರತ್ ಅನ್ನುವ ಸಂಘಟನೆ ನೇತೃತ್ವದಲ್ಲಿ ಮತಾಂತರ ಪ್ರಕ್ರಿಯೆ ನಡೆದಿದ್ದು, ಅಖ್ತರ್ ಆಲಿಯವರ ಹೆಸರನ್ನು ಧರಂ ಸಿಂಗ್ ಎಂದು ಬದಲಾಯಿಸಲಾಗಿದೆ. ಅದರಂತೆ ಇತರ ಸದಸ್ಯರ ಹೆಸರನ್ನೂ ಕೂಡಾ ಬದಲಾಯಿಸಲಾಗಿದೆ.

Advertisements

Leave a Reply

%d bloggers like this: