Advertisements

ದಿ ವಿಲನ್’​ನಲ್ಲಿ ರಾವಣ ಯಾರು ಗೊತ್ತಾ?

ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ನಾಲ್ಕು ರಿಲೀಸಿಂಗ್ ಟೀಸರ್​ಗಳನ್ನು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಯೂ ಟ್ಯೂಬ್ ನಲ್ಲಿ ಒಂದೇ ದಿನ ಟ್ರೆಂಡಿಂಗ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಆದರೆ ವಿಲನ್ ಟೀಸರ್ ನೋಡಿಕೊಂಡು ಬಂದರೆ, ರಾವಣ ಯಾರು? ಎನ್ನುವುದರ ಬಗ್ಗೆ ಇಲ್ಲಿಯೂ ಒಂದೇ ಒಂದು ಸುಳಿವು ಸಿಗಲ್ಲ.

ಈ ನಡುವೆ ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳು ವಿಲನ್ ಅವ್ನಾ, ಇವ್ನಾ ಎಂದು ಟ್ರೆಂಡಿಂಗ್ ಶುರು ಮಾಡಿದ್ದಾರೆ.

ಇನ್ನು ಚಿತ್ರದ ಕುರಿತಂತೆ ಮಾತನಾಡಿರುವ ಶಿವಣ್ಣ ತನ್ನ ಹಾಗೂ ಸುದೀಪ್ ಖಡಕ್ಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಚಿತ್ರ ವೀಕ್ಷಣೆ ವೇಳೆ ಗಲಾಟೆ ಆದ್ರೆ ತಾಯಾಣೆ ಥಿಯೇಟರ್ ಗೆ ಕಾಲಿಡೊಲ್ಲ ಎಂದು ಶಿವಣ್ಣ ಶಪಥ ಮಾಡಿದ್ದಾರೆ.

Advertisements

Leave a Reply

%d bloggers like this: