Advertisements

ನಿಖಿಲ್ ಅಭಿಷೇಕ್ ಜೊತೆಗೆ ಸ್ಕ್ರೀನ್ ಶೇರ್ ಮಾಡ್ತಾರಂತೆ ಹೌದ….

ಅಂಬರೀಶ್ ಕುಮಾರಸ್ವಾಮಿ ಒಂದು ಕಾಲದಲ್ಲಿ ರಾಜಕೀಯವಾಗಿ ಎದುರಾಳಿಗಳಾಗಿದ್ದರು. ಹಾಗಂತ ಅವರಿಬ್ಬರ ಸ್ನೇಹಕ್ಕೆ ಎಂದಿಗೂ ಧಕ್ಕೆಯಾಗಿರಲಿಲ್ಲ. ಮುಂದೆ ಕಾಲ ಬದಲಾಯ್ತು, ಕಾವೇರಿಯಲ್ಲಿ ಹರಿದು ಹೋದ ನೀರಿಗೆ ಲೆಕ್ಕವಿಲ್ಲ.

ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡ ಅಂಬರೀಶ್ ರಾಜಕೀಯಕ್ಕೆ ದೊಡ್ಡ ನಮಸ್ಕಾರ ಸಲ್ಲಿಸಿದರು. ಕೊನೆಗೆ ಜೆಡಿಎಸ್ ಸೇರಲಿಲ್ಲ. ಬದಲಾಗಿ ಜೆಡಿಎಸ್ ಗೆ ಬೆಂಬಲ ಸೂಚಿಸಿದರು. ಆ ಮೂಲಕ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲುವಂತೆ ಮಾಡಿದರು.

1510890_774004846039045_3764329649296028411_n

ಕಾಕತಾಳೀಯ ಅನ್ನುವಂತೆ ಕುಮಾರಸ್ವಾಮಿ ಮತ್ತು ಅಂಬರೀಶ್ ಪುತ್ರರು ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜಾಗ್ವಾರ್ ಓಡಿಸಿ ಸೋತ ನಿಖಿಲ್ ಸೀತಾರಾಮ ಕಲ್ಯಾಣ ಮೂಲಕ ಸೆಕೆಂಡ್ ಇನ್ನಿಂಗ್ ಪ್ರಾರಂಭಿಸಿದ್ದಾರೆ.ಅಮರ್ ಟೈಟಲ್ ಮೂಲಕ ಅಭಿಷೇಕ್ ಅದೃಷ್ಟ ಪರೀಕ್ಷೆಗೆ ಸಿದ್ದರಾಗುತ್ತಿದ್ದಾರೆ.

ಇವರಿಬ್ಬರ ಜುಗಲ್ ಬಂದಿಯಂತೆ ಈಗ ಅವರ ಮಕ್ಕಳ ದರ್ಬಾರ್ ಕೂಡ ನಡೆಯುವ ಸೂಚನೆ ಸಿಗುತ್ತಿದೆ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ರನ್ನು ಜೊತೆ ಜೊತೆಯಾಗಿ ಬೆಳೆಸುವ ಪ್ಲಾನ್ ಇದೆ ಅನ್ನಲಾಗುತ್ತಿದೆ.

1abhishekandnikhilkumar1

ರಾಜಕೀಯ ಮತ್ತು ಸಿನಿಮಾ ಎರಡು ಕಡೆ ಇವರು ಜೊತೆಯಾಗಿ ಬೆಳೆದರೆ ಸಾಕಷ್ಟು ಲಾಭ ಇದೆ ಅನ್ನುವುದು ಲೆಕ್ಕಚಾರ.
ಇದಕ್ಕೆ ಸಾಕ್ಷಿ ಅನ್ನುವಂತೆ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಬಹಳ ಚರ್ಚೆಯಾಗುತ್ತಿದೆ.

ಅಂಬರೀಶ್ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ನಟ ನಿಖಿಲ್ ಕುಮಾರ್ ಭಾನುವಾರ ಅಂಬರೀಶ್ ಪುತ್ರ ಅಭಿಷೇಕ್ ಜೊತೆ ವೀಕ್ಷಿಸಿದ್ದಾರೆ.

abhishekandnikhilkumar

ಈ ಹಿಂದೆ ಕೂಡ ಜ್ಯೂನಿಯರ್ ರೆಬೆಲ್ ಸ್ಟಾರ್ ಸೀತಾರಾಮ ಕಲ್ಯಾಣ’ ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟು ನಿಖಿಲ್ ಜೊತೆ ಸಮಯ ಕಳೆದಿದ್ದರು.

ಇದರೊಂದಿಗೆ ಕೆಲ ನಿರ್ಮಾಪಕರು ಇವರಿಬ್ಬರನ್ನು ಜೊತೆಗೆ ಹಾಕಿಕೊಂಡು ಚಿತ್ರ ತೆಗೆದರೆ ಹೇಗೆ ಎಂದು ಆಲೋಚನೆ ಪ್ರಾರಂಭಿಸಿದ್ದಾರೆ. ಕಥೆ ಇದ್ದರೆ ಕೊಡಿ ಎಂದು ಬೇಡಿಕೆ ಕೂಡಾ ಇಟ್ಟಿದ್ದಾರೆ.

42563717_1012251668936166_7792475820739526656_n

ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಒಂದೆರೆಡು ವರ್ಷದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

Advertisements

Leave a Reply

%d bloggers like this: