Peruser!!! It is a trendy supermarket: read articles on day to day basis in English & Kannada. Read,Share & Care
DDLJ ಚಿತ್ರ ಯಾಕೆ ಹಿಟ್ ಆಯ್ತು ಅನ್ನುವುದಕ್ಕೆ ಸಾವಿರ ಕಾರಣಗಳಿವೆ. ಆದರೆ ಅಜಯ್ ದೇವಗನ್ ಚಿತ್ರ ನೋಡಿಲ್ಲ ಅನ್ನುವುದೇ ದೊಡ್ಡ ವಿಸ್ಮಯ. ಏನೇ ಇರಲಿ, ಈ DDLJ ಚಿತ್ರದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ನಾವು ಇವತ್ತು ಹೇಳುತ್ತೇವೆ.
1995 ಅಕ್ಟೋಬರ್ 20 ರಂದು ತೆರೆಕಂಡ DDLJ ವಿದೇಶಗಳಲ್ಲಿ 16 ಕೋಟಿ ಕಲೆಕ್ಟ್ ಮಾಡಿದ್ರೆ, ಭಾರತದಲ್ಲಿ ಬರೋಬ್ಬರಿ 106 ಕೋಟಿಯನ್ನು ಬಾಚಿ ‘ಆಲ್-ಟೈಮ್ ಬ್ಲಾಕ್ ಬಸ್ಟರ್’ ಅನ್ನುವ ಖ್ಯಾತಿ ಪಡೆದಿದೆ. 1996ನೇ ಸಾಲಿನಲ್ಲಿ 10 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಡಿ.ಡಿ.ಎಲ್.ಜೆ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿತು.
ಕಾಜೋಲ್ ಹೇಳಿದ ಸತ್ಯ : DDLJ ಸಿನಿಮಾವನ್ನ ಅಜಯ್ ನೋಡಿಲ್ಲ ಯಾಕೆ..?
ಇಂದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಕರಣ್ ಜೋಹರ್ DDLJ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿದ್ದರು. ಶಾಟ್ ಗೆ ಕ್ಲಾಪ್ ಮಾಡುವುದರಿಂದ ಹಿಡಿದು ಕಾಸ್ಟ್ಯೂಮ್ ಗಳನ್ನ ನೋಡಿಕೊಳ್ಳುವವರೆಗೂ ಕರಣ್ ಬೆವರು ಹರಿಸಿದ್ದಾರೆ.
ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಅನ್ನುವ ಟೈಟಲ್ ನ ಸೂಚಿಸಿದ್ದು ಅನುಪಮ್ ಖೇರ್ ಪತ್ನಿ ಕಿರಣ್ ಖೇರ್. ಶಾರೂಖ್ ಖಾನ್ ಗಂತೂ ಈ ಟೈಟಲ್ ಬಿಲ್ ಕುಲ್ ಇಷ್ಟವಾಗಿರಲಿಲ್ಲ. ಆದಿತ್ಯ ಛೋಪ್ರಾ ಮಾತ್ರ ‘ಡಿ.ಡಿ.ಎಲ್.ಜೆ’ಗೆ ಮನಸೋತಿದ್ದರು. ಟೈಟಲ್ ತುಂಬಾ ಉದ್ದ ಆಯ್ತು ಎಂದು ಅವತ್ತು ಸಾಕಷ್ಟು ಮಂದಿ ಹೇಳಿದ್ದರಂತೆ.
ರುಕ್ ಜಾ ಓ ದಿಲ್ ದಿವಾನೆ’ ಹಾಡಲ್ಲಿ ಶಾರೂಖ್, ಕಾಜೋಲ್ ರನ್ನ ಕೆಳಗೆ ಬೀಳಿಸುವ ದೃಶ್ಯ ಕಾಜೋಲ್ ಗೆ ಗೊತ್ತೇ ಇರಲಿಲ್ಲ. ಒರಿಜಿನಲ್ ರಿಯಾಕ್ಷನ್ ಬೇಕು ಅನ್ನುವ ಒಂದೇ ಒಂದು ಕಾರಣಕ್ಕೆ ಆದಿತ್ಯ ಕಾಜೋಲ್ ಗೆ ತಿಳಿಸಿರಲಿಲ್ಲ. ಒಂದೇ ಟೇಕ್ ನಲ್ಲಿ ಶಾಟ್ ಓಕೆ ಆಯ್ತು. ಕಾಜೋಲ್ ಬಲವಾದ ಪೆಟ್ಟು ಕೂಡಾ ತಿಂದಿದ್ದರು.
ಶಾರೂಖ್ ರೇಗಿಸುವ ಅನೇಕ ಸೀನ್ ಗಳಲ್ಲಿ ಕಾಜೋಲ್ ಕೊಟ್ಟಿರುವ ಎಕ್ಸ್ ಪ್ರೆಷನ್ ಗಳು ಕೂಡ ಒರಿಜಿನಲ್. ಏನಾಗಲಿದೆ, ಏನಾಗಬೇಕು ಅನ್ನುವುದನ್ನು ಕಾಜೋಲ್ ಗೆ ಯಾರೂ ತಿಳಿಸುತ್ತಿರಲಿಲ್ಲ.
ಈಗ ಕಿರುತೆರೆಯಲ್ಲಿ ಬೇಡಿಕೆ ನಟಿಯಾಗಿರುವ ಮಂದಿರಾ ಬೇಡಿ ಬಣ್ಣ ಹಚ್ಚಿದ ಮೊದಲ ಸಿನಿಮಾ ಇದು. ಮಾತ್ರವಲ್ಲದೆ ಈಗಿನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತೆರೆ ಮೇಲೆ ಕಾಣಿಸಿಕೊಂಡ ಮೊದಲ ಚಿತ್ರ ಕೂಡಾ ಇದು.
ಈ ಚಿತ್ರಕ್ಕೆ ಶಾರೂಖ್ ಖಾನ್ ಮೊದಲ ಆಯ್ಕೆಯಾಗಿರಲಿಲ್ಲ. ವಿದೇಶದಲ್ಲಿ ನೆಲೆಸಿರುವ ಎನ್.ಆರ್.ಐ ಹುಡುಗ ‘ರಾಜ್’ ಪಾತ್ರಕ್ಕಾಗಿ ಆದಿತ್ಯ ತಲೆಗೆ ಮೊದಲು ಹೊಳೆದವರು ಸೈಫ್ ಅಲಿ ಖಾನ್. ಸೈಫ್ ಅದನ್ನ ನಿರಾಕರಿಸಿದ ಪರಿಣಾಮ, ಚಿತ್ರ ಶಾರೂಖ್ ಪಾಲಾಯ್ತು. ಸೈಫ್ ಗೆ ಈ ಬಗ್ಗೆ ಈಗ್ಲೂ ಹೊಟ್ಟೆ ಉರಿಸಿಕೊಳ್ಳುತ್ತಾರೆ.
ಚಿತ್ರದ ‘ಮೆಹೆಂದಿ ಲಗಾಕೆ ರಕ್ನಾ’ ಹಾಡು ಬೇರೆ ಯಾವುದೋ ಚಿತ್ರಕ್ಕಾಗಿ ಬರೆದು ರಿಜೆಕ್ಟ್ ಆಗಿತ್ತು. ಆದರೆ ಇದೇ ಹಾಡನ್ನು ಚಿತ್ರದಲ್ಲಿ ಆದಿತ್ಯ ಬಳಸಿಕೊಂಡರು. ಇದು DDLJ ಗೆ ಬರೆದ ಹಾಡಲ್ಲ.
DDLJ ಚಿತ್ರದ ಒಂದೊಂದು ಹಾಡೂ, ಒಂದಕ್ಕಿಂತ ಒಂದು ವಿಭಿನ್ನ. ಇಂಥ ಹಾಡುಗಳನ್ನ ಸೆಲೆಕ್ಟ್ ಮಾಡುವುದಕ್ಕೆ ಆದಿತ್ಯ ಹರಸಾಹಸ ಪಟ್ಟಿದ್ದಾರೆ. ‘ಮೇರೆ ಕ್ವಾಬೋಂ ಮೇನ್ ಜೋ ಆಯೆ’ ಹಾಡು ಮೊದಲು ರೆಕಾರ್ಡ್ ಆಗುವ ಮುನ್ನ ಆನಂದ್ ಬಕ್ಷಿ ಬರೆದ 24 ಹಾಡುಗಳನ್ನ ಆದಿತ್ಯ ಕಸದ ಬುಟ್ಟಿಗೆ ಹಾಕಿದ್ದರು.