Advertisements

ಅಮೆರಿಕಾದ ಪ್ರಾಣಿ ಸಂಗ್ರಹಾಲಯದಲ್ಲಿ ಆಮೆಗೂ ಬಂತು ವೀಲ್ಹ್ ಚೆಯರ್

ಮನುಷ್ಯರು ಓಡಾಡಲು ಕಷ್ಟವಾದರೆ ವೀಲ್ಹ್ ಚೆಯರ್ ಆಶ್ರಯಿಸುವುದು ಗೊತ್ತಿದೆ. ಕೆಲ ವರ್ಷಗಳ ಹಿಂದೆ ನಾಯಿಗೂ ಓಡಾಡಲು ವೀಲ್ಹ್ ಚೆಯರ್ ಮಾಡಿಕೊಟ್ಟು ಕೆಲ ಶ್ವಾನ ಪ್ರಿಯರು ಸುದ್ದಿಯಾಗಿದ್ದರು.

ಆದರೆ ಆಮೆಗೂ ವೀಲ್ಹ್ ಚೆಯರ್ ಅಂದರೆ ನಂಬುವುದಕ್ಕೆ ಸ್ಪಲ್ಪ ಕಷ್ಟ ತಾನೇ. ಹೌದು, ಈಗ ಅಮೆರಿಕಾದ ಮೇರಿ ಲ್ಯಾಂಡ್ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಆಮೆಗೂ ವೀಲ್ಹ್ ಚೆಯರ್ ತಯಾರಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಿಬ್ಬಂದಿಗೆ ಕೆಳ ಭಾಗದ ಚಿಪ್ಪು ಹಾನಿಯಾದ ಆಮೆಯೊಂದು ಸಿಕ್ಕಿತ್ತು. ಚಿಪ್ಪು ಹಾನಿಯಾಗಿದ್ದ ಕಾರಣ ಆಮೆಗೆ ಒಡಾಡುವುದು ಕಷ್ಟವಾಗಿತ್ತು.

ಹೀಗಾಗಿ ಆಮೆಯ ನೋವಿಗೆ ಸ್ಪಂದಿಸಿದ ಸಿಬ್ಬಂದಿ, ಹೇಗಾದರೂ ಮಾಡಿ ಇದು ಓಡಾಡುವಂತೆ ಮಾಡಬೇಕು ಎಂದು ನಿರ್ಧರಿಸಿದರು.

ವೀಲ್ಹ್ ಚೆಯರ್ ತಯಾರಿಸುವ ಕುರಿತಂತೆ ಚಿತ್ರ ಬಿಡಿಸಿದರು, ಗೆರೆ ಹಾಕಿದರು. ಕೊನೆಗೆ ವೀಲ್ಹ್ ಚೆಯರ್ ತಯಾರಿಸುವ ಐಡಿಯಾ ರೆಡಿಯಾಯ್ತು. ಹಗುರವಾದ ವಸ್ತುಗಳಿಂದ ವೀಲ್ಹ್ ಚೆಯರ್ ಕೂಡಾ ಸಿದ್ದವಾಯ್ತು.

ಕೊನೆಗೆ ಆಮೆಗೆ ಸರ್ಜರಿ ಮಾಡಿ, ಚಿಪ್ಪುಗಳನ್ನು ಜೋಡಿಸುವ ಕೆಲಸ ಮಾಡಿ, ವೀಲ್ಹ್ ಚೆಯರ್ ಅನ್ನು ಗಿಫ್ಟ್ ಆಗಿ ಕೊಟ್ಟರು.

ಆಮೆರಿಕಾದ ಸಿಬ್ಬಂದಿ ಇಂತಹುದೊಂದು ಪುಣ್ಯದ ಕಾರ್ಯ ಮಾಡಿದ್ದಾರೆ. ನಮ್ಮಲ್ಲಿ ಗಾಯಗೊಂಡಿದ್ದ ಆಮೆ ಸಿಕ್ಕಿದ್ರೆ ಏನು ಮಾಡುತ್ತಿದ್ದರೂ ಊಹಿಸಿಕೊಳ್ಳಿ.

ಇದೀಗ ಮೇರಿ ಲ್ಯಾಂಡ್ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಸಾಧನೆಗೆ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.

 

 

 

Advertisements

Leave a Reply

%d bloggers like this: