Advertisements

ಕಾಜೋಲ್ ಹೇಳಿದ ಸತ್ಯ : DDLJ ಸಿನಿಮಾವನ್ನ ಅಜಯ್ ನೋಡಿಲ್ಲ ಯಾಕೆ..?

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ’, ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ ನಿತ್ಯ ಹಸಿರಿನ ಅತಿ ಹೆಚ್ಚಿನ ಜನಪ್ರಿಯ ಬಾಲಿವುಡ್ ಪ್ರೇಮಕಥೆಯ ಚಿತ್ರವಾಗಿ ಹೊರಹೊಮ್ಮಿದೆ.

ಅಂತರ್ಜಾಲ ಸಮೀಕ್ಷೆ ಮತ್ತು ಮಾರುಕಟ್ಟೆ ಸಂಶೋಧನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸೊಗೋಸರ್ವೇ ಮಾಡಿರುವ ಸಮೀಕ್ಷೆಯ ಪ್ರಕಾರ ಆದಿತ್ಯ ಚೋಪ್ರಾ ನಿರ್ದೇಶನದ, ರಾಜ್ (ಶಾರುಕ್ ಖಾನ್) ಮತ್ತು ಸಿಮ್ರಾನ್ (ಕಾಜೋಲ್) ಪಾತ್ರಗಳ ನಡುವಿನ ಬಾಲಿವುಡ್ ಪ್ರೇಮಕತೆ ವಿವಿಧ ವಯಸ್ಸಿನ ಜನರ ಮಧ್ಯೆ ಜನಪ್ರಿಯ ಸಿನೆಮಾ ಆಗಿ ಉಳಿದಿದೆ ಎಂದು ತಿಳಿಸಿದೆ.

ಕಾಜೋಲ್ whatsapp ನಂಬರ್ ಬೇಕಾ…?

ಪ್ರೀತಿಗೆ, ಅದರ ರೀತಿಗೆ ಹೊಸ ವ್ಯಾಖ್ಯಾನ ಕೊಟ್ಟು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಸೃಷ್ಟಿಸಿರುವ ಸಿನಿಮಾ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ”. 1995, ಅಕ್ಟೋಬರ್ 19 ರಂದು ತೆರೆಗೆ ಬಂದ ಈ ಸಿನಿಮಾ ಸೃಷ್ಟಿಸಿದ ಅಲೆ ಊಹಿಸಲು ಅಸಾಧ್ಯ.

ಆದರೆ ಇತಿಹಾಸ ಸೃಷ್ಟಿಸಿದ ಈ ಸಿನಿಮಾವನ್ನು ಕಾಜೋಲ್ ಪತಿ ಅಜಯ್ ದೇವಗನ್ ವೀಕ್ಷಿಸಿಯೇ ಇಲ್ವಂತೆ.

ವೆಬ್ ಸೈಟ್ ಒಂದರ ಜೊತೆಗೆ ಮಾತನಾಡಿರುವ ಕಾಜೋಲ್ ಈ ಸತ್ಯವನ್ನು ಅನಾವರಣಗೊಳಿಸಿದ್ದು, ನನ್ನ ಉಳಿದ ಎಲ್ಲಾ ಸಿನಿಮಾಗಳನ್ನು ಅವರು ವೀಕ್ಷಿಸಿದ್ದಾರೆ. ಆದರೆ ಕಾಜೋಲ್ ಅಭಿನಯದ ಯಾವ ಚಿತ್ರವನ್ನು ಅಜಯ್ ದೇವಗನ್ ನೋಡಿಲ್ಲ ಅಂದರೆ ಅದು DDLJ ಮಾತ್ರ ಎಂದು ಹೇಳಿದ್ದಾರೆ.

ಹಾಗಾದರೆ ಅಜಯ್ ದೇವಗನ್ ಈ ಚಿತ್ರವನ್ನು ಯಾಕೆ ನೋಡಿಲ್ಲ ಅನ್ನುವ ಪ್ರಶ್ನೆಗೆ ಕಾಜೋಲ್ ಗೂ ಉತ್ತರ ಸಿಕ್ಕಿಲ್ಲವಂತೆ. ಪತಿಯ ಬಳಿ ಹಲವಾರು ಬಾರಿ ಇದೇ ಪ್ರಶ್ನೆಯನ್ನು ಅವರು ಕೇಳಿದ್ದಾರೆ, ಆದರೆ ಸಮಾಧಾನ ಪಡುವ ಉತ್ತರವನ್ನು ಅಜಯ್ ದೇವಗನ್ ಕೊಟ್ಟಿಲ್ವಂತೆ. ಬದಲಾಗಿ ಸಿಕ್ಕಿದ್ದು ಬರೀ ಹಾರಿಕೆ ಉತ್ತರವಂತೆ.

DDLJ

Advertisements

2 Comments on “ಕಾಜೋಲ್ ಹೇಳಿದ ಸತ್ಯ : DDLJ ಸಿನಿಮಾವನ್ನ ಅಜಯ್ ನೋಡಿಲ್ಲ ಯಾಕೆ..?

  1. Pingback: ನಿಮಗೆ ಗೊತ್ತಿರದ DDLJ ಕಥೆಯಿದು….! – torrentspree

  2. Pingback: ಬ್ಯಾಗ್ ಕೊಟ್ಟು ಶಿಲ್ಪಾ ಶೆಟ್ಟಿಯನ್ನು ಪಟಾಯಿಸಿದ್ದ ಕುಂದ್ರಾ – torrentspree

Leave a Reply

%d bloggers like this: