Advertisements

ಶಬರಿಮಲೆಗೆ ಹೋಗ್ತಾರಂತೆ ಸಂಜನಾ…

ಶಬರಿ ಮಲೆ ದೇವಸ್ಥಾನದ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ದೇವಸ್ಥಾನಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ.

ಮಹಿಳೆಯರೂ ಅಯ್ಯಪ್ಪ ದರ್ಶನ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದನ್ನು ಸ್ವಾಗತಿಸಿರುವ ನಟಿ ಸಂಜನಾ ಗಲ್ರಾನಿ ತಾವು ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದಾರೆ. ‘ಹಲವು ಪುಣ್ಯಕ್ಷೇತ್ರಗಳಿಗೆ ನಾನು ಈಗಾಗಲೇ ಹೋಗಿದ್ದೇನೆ. ಆದರೆ, ಶಬರಿಮಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಸುಪ್ರೀಂ ಕೋರ್ಟ್‌ ತೀರ್ಪು ಬಂದಿರುವುದರಿಂದ ಇಲ್ಲಿಗೆ ಖಂಡಿತ ಹೋಗುತ್ತೇನೆ’ ಎಂದಿದ್ದಾರೆ.

1Sanjana

 

Advertisements

Leave a Reply

%d bloggers like this: