Advertisements

ಒಂದು ಹುಡುಗಿಯಲ್ಲ ನಾಲ್ಕು ಜನ ನನ್ನ ತೊಡೆ ಮೇಲೆ ಕೂತಿದ್ದರು…!

ಮೈಸೂರು ರಸ್ತೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದ ದರ್ಶನ್, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ದಾಸ ಮೊದಲು ಉಗಿದಿದ್ದು ಸುದ್ದಿ ವಾಹಿನಿಗಳಿಗೆ.

ಆಸ್ಪತ್ರೆಯಲ್ಲಿ ಇದ್ದಕೊಂಡು ನಾನು ಎಲ್ಲ ನ್ಯೂಸ್ ಚಾನೆಲ್‍ಗಳನ್ನು ನೋಡಿದ್ದೇನೆ. ಊಹಾಪೋಹಗಳ ಮೇಲೆ ನೀವೇ ಎಲ್ಲವನ್ನೂ ನಿರ್ಧಾರ ಮಾಡಿಬಿಟ್ಟರೆ ಹೇಗೆ? ಕಾರಿನಲ್ಲಿ ಯುವತಿಯೊಬ್ಬರು ಇದ್ದರು ಎಂದು ಒಂದು ಸುದ್ದಿ ವಾಹಿನಿ ವರದಿ ಮಾಡಿದೆ. ಒಬ್ಬರಲ್ಲ ನಾಲ್ವರು ನನ್ನ ತೊಡೆಯ ಮೇಲೆ ಕೂತಿದ್ದರು, ಆರ್ ಯೂ ಹ್ಯಾಪಿ ಎಂದು ಮಾತಿನಲ್ಲೇ ಚಾಟಿ ಬೀಸಿದರು.

ವರದಿಗಾರರು ಕೊಟ್ಟ ಸಮರ್ಥನೆಗಳಿಗೆಲ್ಲಾ ತನ್ನದೇ ಶೈಲಿಯಲ್ಲಿ ಉತ್ತರಿಸಿದ ಯಜಮಾನ, ವರದಿಗಾರರ ಬೆವರಿಳಿಸಿದರು.

ಒಂದು ತಿಂಗಳ ವಿಶ್ರಾಂತಿ ಬಳಿಕ ಜಿಮ್ ಮಾಡುತ್ತೇನೆ. ನಾನು ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ. ನೋಡಿ ಮೈಕಟ್ಟು ಹೇಗಿದೆ ಅಂತಾ ತಮ್ಮ ಬಲಗೈ ತೋಳುಗಳನ್ನು ತೋರಿಸಿದರು. ಒಂದು ವರ್ಷ ಬೇಕು ಎಂದು ಯಾವುದೋ ವಾಹಿನಿ ಹೇಳಿದೆ. ಅದಕ್ಕೂ ಉತ್ತರ ಕೊಡ್ತೀನಿ ಎಂದು ನಗುತ್ತಾ ತಿವಿದರು.

ಸುದ್ದಿ ವಾಹಿನಿಗಳನ್ನು ಕಾಮಿಡಿ ಚಾನೆಲ್ ಗಳಿಗೆ ಹೋಲಿಸಿದ ದರ್ಶನ್,  6 ದಿನ ಕಾಮಿಡಿ ಚಾನೆಲ್ ಚೆನ್ನಾಗಿತ್ತು ಎಂದಿದ್ದಾರೆ.

Advertisements

Leave a Reply

%d bloggers like this: