Advertisements

ಸರಿಗಮಪಗೆ ಮತ್ತೆ ಎಂಟ್ರಿ ಕೊಟ್ಟ ರಾಜೇಶ್ ಕೃಷ್ಣನ್

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ಕಾರ್ಯಕ್ರಮ 14 ಸೀಜನ್‍ಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಈಗ 15ನೇ ಸೀಜನ್ಗೆ ವೇದಿಕೆ ಸಿದ್ಧವಾಗಿದೆ.

ಈ ಸೀಜನ್‍ನಲ್ಲಿ ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಜೊತೆಗೆ ರಾಜೇಶ್ ಕೃಷ್ಣನ್ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದ ಗಾಯಕ ರಾಜೇಶ್ ಕೃಷ್ಣನ್ ಅವರು ಈಬಾರಿ ತನ್ನ ಗುರುಗಳಾದ ಹಂಸಲೇಖ ಅವರ ಕರೆಗೆ ಓಗೊಟ್ಟು ಮತ್ತೆ ಎಂಟ್ರಿಯಾಗಿದ್ದಾರೆ.

ಇನ್ನು ಕಳೆದ ಬಾರಿಯ ಕಾರ್ಯಕ್ರಮದ ಅನುಪಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ ಕೃಷ್ಣನ್, ಕಳೆದ ವರ್ಷ ನಮ್ಮ ತಂದೆಯ ಅಗಲಿಕೆ ಬೇಸರ ತಂದಿತ್ತು. ಈಗ ಮತ್ತೆ ನಾನು ಇಲ್ಲಿಗೆ ಬರಲು ಕಾರಣ ನನ್ನ ಗುರುಗಳು. ಮತ್ತೊಮ್ಮೆ ಗೆಳೆಯರೆಲ್ಲರ ಜೊತೆ ಬೆರೆಯುವುದಕ್ಕೆ ಖುಷಿಯಾಗುತ್ತಿದೆ” ಎಂದಿದ್ದಾರೆ.

ಇನ್ನು ಶಿಷ್ಯನ ಮರು ಪ್ರವೇಶ ಕುರಿತಂತೆ ಮಾತನಾಡಿರುವ ನಾದಬ್ರಹ್ಮ ಹಂಸಲೇಖ, ಈ ಹಿಂದೆ 5 ತಿಂಗಳಲ್ಲಿ ನಾನು ಬಹಳಷ್ಟು ಕಡೆ ಅಭಿಮಾನಿಗಳನ್ನು ಸಂಪಾದಿಸಿದ್ದೇನೆ. ನನ್ನ ಹಾಗೂ ರಾಜೇಶ್ ಕೃಷ್ಣನ್ ಅವರದು ಬರೀ ಸ್ನೇಹ ಅಲ್ಲ, ಬಾಂಧವ್ಯ. ರಾಜೇಶ್ ಕೃಷ್ಣನ್ ನನ್ನು ಕಂಡರೆ ಚಿಕ್ಕ ಮಕ್ಕಳಿಗೆ ಸಿಕ್ಕಾಪಟ್ಟೆ ಪ್ರೀತಿ. ಹೀಗಾಗಿ ಅವರು ಮತ್ತೆ ಬಂದಿರುವುದು ಖುಷಿ ವಿಚಾರ ಅಂದಿದ್ದಾರೆ.

Advertisements

Leave a Reply

%d bloggers like this: