ವಿಧಾನಸೌಧದಲ್ಲಿ ದೋಸ್ತಿ…ಹಾಸನದಲ್ಲಿ ಕುಸ್ತಿ

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎರಡೂ ಪಕ್ಷದ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿದೆ. ಈ ಕಾರಣದಿಂದ ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಯ ಫಲವನ್ನು ಉಣ್ಣುವ ಲಕ್ಷಣ ಕಾಣಿಸುತ್ತಿದೆ.

ಇದರ ಮುನ್ಸೂಚನೆ ಅನ್ನುವಂತೆ ಹಾಸನ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.

ಹಾಸನದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಸದಸ್ಯ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಿನ್ನೆಲೆಯಲ್ಲಿ ಜಿ.ಪಂನಲ್ಲಿ ನಡೆದ ಸಭೆ ಗೊಂದಲ ಗೂಡಾಗಿದ್ದು, ಸದಸ್ಯರ ಖಾತೆ ಅದಲು ಬದಲಾದ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಿ.ಪಂ. ಸದಸ್ಯರ ನಡುವೆ ವಾಕ್ಸಮರವೇ ನಡೆದಿದೆ.

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಸಚಿವ ಎ.ಮಂಜುರವರ ಪುತ್ರ ಮಂಥರ್ ಗೌಡ ನಡುವೆ ಭಾರೀ ವಾಕ್ಸಮರ ನಡೆದಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳಿಗೆ ನಡೆದಿರುವ ಅವಿರೋಧ ಆಯ್ಕೆಯ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಶಾಸಕರಾದ ಶಿವಲಿಂಗೇಗೌಡ ಹಾಗೂ ಸದಸ್ಯ ಮಂತರ್ ಗೌಡರ ನಡುವೆ ಕಿತ್ತಾಟ ನಡೆದಿದ್ದು, ಜಿ.ಪಂನಲ್ಲಿ ಕಡಿಮೆ ಸ್ಥಾನ ಗೆದ್ದಿದ್ದೀರಿ ಸುಮ್ಮನಿರಿ ಎಂದು ಶಾಸಕ ಶಿವಲಿಂಗೇಗೌಡ ಕಿಚಾಯಿಸಿದ್ದಕ್ಕೆ, ರಾಜ್ಯದಲ್ಲಿ 35 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಸ್ಥಾನವನ್ನೆ ಬಿಟ್ಟು ಕೊಟ್ಟಿದ್ದೇವೆ ಎಂದು ಮಂತರ್ ಗೌಡ ತಿರುಗೇಟು ನೀಡಿದರು.

ಸಿಎಂ ಸ್ಥಾನ ಕೊಡಿ ಎಂದು ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಯಾರ ಮನೆ ಬಾಗಿಲಿಗೂ ಬಂದಿರಲಿಲ್ಲ ಎಂದು ಭವಾನಿ ರೇವಣ್ಣ ಮಂತರ್ ಗೌಡಗೆ ಪ್ರತ್ಯುತ್ತರ ನೀಡಿದರು. ಅಲ್ಲದೆ, ಇಲ್ಲಿ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತಾಡಬೇಡಿ ಎಂದು ರೇಗಿದರು.

ಇವರಿಬ್ಬರ ಆಟ ನೋಡಿ ಮುಂದಿನ ಚುನಾವಣೆಯಲ್ಲಿ ಜನರೇ ಸೂಕ್ತ ನಿರ್ಧಾರ ಕೈಗೊಳ್ಳುವುದು ಬೆಟರ್.

One Comment on “ವಿಧಾನಸೌಧದಲ್ಲಿ ದೋಸ್ತಿ…ಹಾಸನದಲ್ಲಿ ಕುಸ್ತಿ

  1. Pingback: ಸಸ್ಪೆಂಡ್ ಮಾಡುತ್ತಾ ಕೂತ್ರೆ…? ಡಿಸಿ ಸಿಂಧೂರಿ ಮಾತು ಕೇಳಿ ರೇವಣ್ಣ ಗಪ್ ಚುಪ್ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: