ಮಾಜಿ ಮೇಯರ್ ಗಳ ಭರವಸೆಯನ್ನು ಮತ್ತೆ ಪುನರುಚ್ಛರಿಸಿದ ನೂತನ ಮೇಯರ್

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರಿ ಹೈಡ್ರಾಮಾಗಳ ನಂತರ ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ.

ಹೊಸ ಮೇಯರ್ ಮೇಲೆ ಸಾಕಷ್ಟು ಹೊಣೆಗಾರಿಕೆ ಇದೆ. ಹಾದಿ ತಪ್ಪಿರುವ ಆಡಳಿತವನ್ನು ಸರಿ ಪಡಿಸಬೇಕು. ಹೈಕೋರ್ಟ್ ಬೀಸುತ್ತಿರುವ ಚಾಟಿಯೇಟನ್ನು ತಡೆದುಕೊಳ್ಳುವುದೇ ಹೊಸ ಮೇಯರ್ ಅವರಿಗೆ ದೊಡ್ಡ ತಲೆ ನೋವು.

ಈ ನಡುವೆ ನೂತನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಗಂಗಾಂಬಿಕೆ ಮಲ್ಲಿಕಾರ್ಜುನ್,ನಗರದಲ್ಲಿ ಶೇ.100ರಷ್ಟು ಕಸ ವಿಂಗಡಣೆಯ ಗುರಿ ಸಾಧಿಸುತ್ತೇವೆ. ಸ್ವಚ್ಛತೆ, ಆರೋಗ್ಯ, ಉತ್ತಮ ಪರಿಸರ ಮತ್ತು ರಾಜಕಾಲುವೆ ಒತ್ತುವರಿ ತೆರವಿಗೆ ಹೆಚ್ಚು ಒತ್ತು ನೀಡುತ್ತೇನೆ ಅಂದಿದ್ದಾರೆ.

ನಗರದಲ್ಲಿ ಕಸದ್ದು ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇನೆ.ನಗರವನ್ನು ಕಸಮುಕ್ತ ಮಾಡುತ್ತೇನೆ. ಮೂಲದಲ್ಲೇ ಕಸ ವಿಂಗಡಣೆ ಮಾಡಿದರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಈ ವಿಚಾರದಲ್ಲಿ ಜನರ ಸಹಕಾರ ಅಗತ್ಯ ಎಂದಿದ್ದಾರೆ.

ಬರೆದಿಟ್ಟುಕೊಳ್ಳಿ ಇದು ಕೇವಲ ಭರವಸೆಯಾಗಿ ಉಳಿಯುತ್ತದೆ. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಅಧಿಕಾರಿಗಳು ಬಿಬಿಎಂಪಿಯಲ್ಲಿದ್ದಾರೆ. ಹೈಕೋರ್ಟ್ ಕೆಂಗಣ್ಣಿಗೂ ಗುರಿಯಾದರೂ ಭಯಪಡದ ಧೈರ್ಯವಂತ ಅಧಿಕಾರಿಗಳು ಪಾಲಿಕೆಯಲ್ಲಿ ಇದ್ದಾರೆ ಅಂದ ಮೇಲೆ, ಕಸದ ಸಮಸ್ಯೆ, ರಾಜಕಾಲುವೆ ಒತ್ತುವರಿ ತೆರವು ಕನಸಾಗಿರುತ್ತದೆ.

ರಾಜಕಾಲುವೆ ಒತ್ತುವರಿ ತೆರವು ಮಾಡಲು ಹೊರಟರೆ ದೊಡ್ಡ ದೊಡ್ಡ ಕುಳಗಳು ಅದ್ಯಾವ ಆಟ ಆಡಿದ್ದಾರೆ. ಅದಕ್ಕೆ ಯಾರೆಲ್ಲಾ ಬೆಂಬಲವಾಗಿ ನಿಂತಿದ್ದರು ಎಂದು ಮಾಧ್ಯಮಗಳು ಈಗಾಗಲೇ ಮಾಹಿತಿ ಕೊಟ್ಟಿವೆ.

ಇನ್ನು ಮೂಲದಲ್ಲೇ ಕಸ ವಿಂಗಡಣೆ, ಇದಕ್ಕೆ ಹೈಕೋರ್ಟ್ ಮದ್ದು ಅರೆಯಬೇಕು ಹೊರತು, ಪಾಲಿಕೆ ಇದನ್ನು ಮಾಡುತ್ತದೆ ಅಂದರೆ ಚಂದ್ರನನ್ನು ಹಿಡಿದು ಮಕ್ಕಳ ಆಟಕ್ಕೆ ಕೊಟ್ಟಂತೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: