Advertisements

8 ಎಮ್ಮೆ ಮಾರಿ ದೇಶಕ್ಕೆ 23 ಲಕ್ಷ ರೂಪಾಯಿ ಸಂಗ್ರಹಿಸಿದ ಇಮ್ರಾನ್ ಖಾನ್

ನೆರೆಯ ಪಾಕಿಸ್ತಾನ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ಬೊಕ್ಕಸರ ಬರಿದಾಗಿದ್ದು, ದೇಶ ನಡೆಸುವುದೇ ದೊಡ್ಡ ಸಾಹಸವಾಗಿದೆ.

ಹೀಗಾಗಿ ನೂತನ ಪ್ರಧಾನಿ ಇಮ್ರಾನ್ ಖಾನ್ ಹಣಕಾಸು ಹೊಂದಿಸಲು ಇನ್ನಿಲ್ಲದ ಹರ ಸಾಹಸ ಮಾಡುತ್ತಿದ್ದಾರೆ.

ಕಳೆದ ವಾರ 61 ಸರ್ಕಾರದ ಲಕ್ಸುರಿ ಕಾರುಗಳನ್ನು ಹರಾಜು ಮಾಡಿ 200 ಮಿಲಿಯನ್ ಹಣ ಗಳಿಸಿದ್ದ ಪಾಕಿಸ್ತಾನ ಸರ್ಕಾರಿ, ಇದೀಗ ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ 23 ಲಕ್ಷ ರೂಪಾಯಿಯನ್ನು ಸಂಪಾದಿಸಲಾಗಿದೆ.

ಇಸ್ಲಾಮಾಬಾದಿನಲ್ಲಿ ನಡೆದ ಹರಾಜಿನಲ್ಲಿ ಮೂರು ಎಮ್ಮೆಗಳು ಹಾಗೂ ಐದು ಮರಿಗಳನ್ನು 2,302,000 ರೂ. ಗೆ ಹರಾಜು ಹಾಕಲಾಗಿದೆ. ವಿಶೇಷ ಅಂದರೆ ಇವುಗಳನ್ನು ನವಾಜ್ ಷರೀಪ್ ಅವರ ಬೆಂಬಲಿಗರೇ ಕೊಂಡು ಕೊಂಡಿದ್ದಾರೆ.

2018-09-27_22-31-00

8 ಎಮ್ಮೆಗಳಲ್ಲಿ ಒಂದನ್ನು 385,000 ರೂ.ಗೆ ನವಾಜ್ ಷರೀಪ್ ಬೆಂಬಲಿಗ ಕ್ವಾಲಬ್ ಆಲಿ ಎಂಬವರು ಹರಾಜು ಕೂಗಿದ್ದಾರೆ. ಶರೀಫ್ ಮೇಲಿನ ಅಭಿಮಾನದಿಂದಾಗಿ ಮೂರು ಪಟ್ಟು ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳಲಾಗಿದೆ . ನಾಲ್ಕು ಮರಿ ಎಮ್ಮೆಗಳಲ್ಲಿ ಎರಡನ್ನು ಪಿಎಂಎಲ್ -ಎನ್ ಪಕ್ಷದ ಕಾರ್ಯಕರ್ತ ಪಾಖರ್ ವಾರ್ಯಾಚಿ 215, 000 ಹಾಗೂ 270,000ಕ್ಕೆ ಮತ್ತೊಬ್ಬರು ಮೂರನೇ ಮರಿಯನ್ನು 182,000 ಗೆ ಕೊಂಡುಕೊಂಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.

ಆದರೆ ಬಂದಿರುವ ಹಸಿದ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಾಗಿದ್ದು, ಮಾಡಿರುವ ಬೃಹತ್ ಪ್ರಮಾಣದ ಸಾಲದಿಂದಾಗಿ ಪಾಕ್ ದೊಡ್ಡ ಮಟ್ಟದ ಆರ್ಥಿಕ ಕೊರತೆ ಅನುಭವಿಸುತ್ತಿದೆ.

ಹೀಗಾಗಿ ಬುಲೆಟ್ ಪ್ರೂಪ್ ವಾಹನ, ನಾಲ್ಕು ಹೆಲಿಕಾಪ್ಟರ್ ಸೇರಿದಂತೆ 102 ಕಾರುಗಳನ್ನು ಹರಾಜು ಹಾಕುವ ಚಿಂತನೆ ನಡೆಸಲಾಗಿದೆ.

Advertisements

One Comment on “8 ಎಮ್ಮೆ ಮಾರಿ ದೇಶಕ್ಕೆ 23 ಲಕ್ಷ ರೂಪಾಯಿ ಸಂಗ್ರಹಿಸಿದ ಇಮ್ರಾನ್ ಖಾನ್

  1. Pingback: ಕಿಚ್ಚನ ಬಿಗ್ ಬಾಸ್ ಮನೆಯ ಗೃಹ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ – torrentspree

Leave a Reply

%d bloggers like this: