Advertisements

ಮುಖೇಶ್ ಅಂಬಾನಿ ಆದಾಯ ಗಂಟೆಗೆ 12.5 ಕೋಟಿ….! ಅಂದರೆ ದಿನಕ್ಕೆ ಎಷ್ಟಾಯ್ತು

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಕಳೆದ ಒಂದು ವರ್ಷದಿಂದ ದಿನಕ್ಕೆ 300 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಬಾರ್‌ಕ್ಲೇಸ್‌ ಹುರಾನ್‌ ಇಂಡಿಯಾ ಎಂಬ ಸಂಸ್ಥೆ ಸಿದ್ಧಪಡಿಸಿದ ಸಿರಿವಂತರ ಪಟ್ಟಿಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

ಒಟ್ಟು 3,71,000 ಕೋಟಿ ರೂ. ಸಂಪತ್ತಿನೊಂದಿಗೆ ಮುಕೇಶ್‌ ಅಂಬಾನಿಯವರು ಬಾರ್‌ಕ್ಲೇಸ್‌ ಪಟ್ಟಿಯಲ್ಲಿ ಸತತ 7 ವರ್ಷಗಳಿಂದ ಭಾರತದ ನಂ.1 ಶ್ರೀಮಂತರೆನಿಸಿದ್ದಾರೆ. ಎಸ್‌ಪಿ ಹಿಂದೂಜಾ ಮತ್ತು ಕುಟುಂಬ (1,59,000 ಕೋಟಿ ರೂ.), ಎಲ್‌ಎನ್‌ ಮಿತ್ತಲ್‌ ಮತ್ತು ಕುಟುಂಬ (1,14,500 ಕೋಟಿ ರೂ.) ಮತ್ತು ಅಜೀಂ ಪ್ರೇಮ್‌ಜಿ (96,100 ಕೋಟಿ ರೂ.) ನಂತರದ ಮೂರು ಸ್ಥಾನಗಳಲ್ಲಿದ್ದಾರೆ.

ವಿಶೇಷ ಅಂದರೆ ಈ ಮೂವರ ಆದಾಯ ಒಟ್ಟುಗೂಡಿಸಿದರೂ ಅದಕ್ಕಿಂತ ಹೆಚ್ಚಿನ ಆದಾಯವನ್ನು ಮುಖೇಶ್ ಗಳಿಸುತ್ತಿದ್ದಾರೆ.

Advertisements

Leave a Reply

%d bloggers like this: