ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ: ಮೋದಿ

125 ವರ್ಷ ಹಳೆಯದಾದ ಕಾಂಗ್ರೆಸ್ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಏಕೆ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಮಂಗಳವಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನದ ಪ್ರಯುಕ್ತ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕರ್ತ ಮಹಾಕುಂಭ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು 125 ವರ್ಷದ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಆತ್ಮಾವಲೋಕನ ಮಾಡಿಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

125 ವರ್ಷ ಇತಿಹಾಸ ಹೊಂದಿರುವ ಪಕ್ಷ ಮೈತ್ರಿಗಾಗಿ ಸಣ್ಣ ಪಕ್ಷಗಳ ಬಳಿ ಭಿಕ್ಷೆ ಬೇಡುವ ಹೀನಾಯ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ, ಆ ಸರ್ಕಾರ ಯಶಸ್ವಿಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

42474119_10160956111665165_3852450300027731968_n

ರಫೆಲ್ ಖರೀದಿ ವಿವಾದ ಸಂಬಂಧ ಕಾಂಗ್ರೆಸ್ ಮತ್ತು ಪಾಕಿಸ್ತಾನಿ ನಾಯಕರು ಮೋದಿ ಅವರನ್ನು ಭಾರತದ ರಾಜಕೀಯದಿಂದ ಕಿತ್ತೊಗೆಯಲು ಬಯಸುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದ ಬೆನ್ನಲ್ಲೆ ಮೋದಿ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಮಾತಿನ ಪ್ರಹಾರವನ್ನು ನಡೆಸಿದ್ದಾರೆ.

ಪ್ರತಿಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಾಂಗ್ರೆಸ್ ವಿಫಲವಾಗಿದೆ. ಆದರೂ ಮೈತ್ರಿಗಾಗಿ ಸಣ್ಣಪುಟ್ಟ ಪಕ್ಷಗಳ ಬಳಿ ಅಂಗಲಾಚುತ್ತಿದೆ. ಅಲ್ಲದೆ ವಿದೇಶಗಳಲ್ಲಿ ಮೈತ್ರಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಭಾರತದ ಪ್ರಧಾನಿ ಯಾರು ಎಂಬುದನ್ನು ಪ್ರಪಂಚ ನಿರ್ಧರಿಸುತ್ತದೆಯೇ? ಎಂದು ಮೋದಿ ಪ್ರಶ್ನಿಸಿದ್ದಾರೆ.

42492795_10160956111525165_5060340879147925504_n

ಭಾರತದ ಪ್ರಧಾನಿ ಯಾರಾಗಬೇಕೆಂಬುದನ್ನು ಪರದೇಶದವರು ನಿರ್ಧರಿಸಬೇಕಾ? ಕಾಂಗ್ರೆಸ್​ ಅಧಿಕಾರವನ್ನು ಮಾತ್ರ ಕಳೆದುಕೊಂಡಿಲ್ಲ. ಜತೆಗೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದೆ ಎಂದು ವಾಗ್ದಾಳಿ ಮುಂದುವರಿಸಿದರು.

ಜಗತ್ತಿನ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ. ಆದರೆ ನಮ್ಮಲ್ಲಿ ಮಹಿಳೆ ನೇತೃತ್ವದ ರಾಜಕೀಯ ಪಕ್ಷಕ್ಕೆ ಮಹಿಳೆಯರ ಬಗ್ಗೆಯೇ ಕಾಳಜಿ ಇಲ್ಲ. ಕೇವಲ ಮತಕ್ಕಾಗಿ ತ್ರಿವಳಿ ತಲಾಖ್ ಗೆ ವಿರೋಧಿಸುತ್ತಿದ್ದಾರೆ ಎಂದರು.

ನಮ್ಮ ಸಮಾಜದಲ್ಲಿರುವ ಮತ ಬ್ಯಾಂಕ್ ರಾಜಕಾರಣವನ್ನು ಕಿತ್ತೊಗೆಯುವುದು ನಮ್ಮ ಪಕ್ಷದ ಪ್ರಮುಖ ಉದ್ದೇಶ. ಬಿಜೆಪಿ ಅಖಂಡ ಮಾನವತಾವಾದ, ಸಬಕ್ ಸಾಥ್ ಸಬಕ್ ವಿಸಾಸದಲ್ಲಿ ನಂಬಿಕಿ ಇರಿಸಿದೆ. ಆದರೆ ಪ್ರಪಂಚದಲ್ಲಿ ಯಾವ ಪಕ್ಷವೂ ಇದುವರೆಗೂ ಈ ಬಗ್ಗೆ ಮಾತನಾಡಿರುವುದನ್ನು ನಾನು ಕಂಡಿಲ್ಲ ಎಂದು ಪ್ರಧಾನಿ ಹೇಳಿದರು.

ಕಳೆದ ಸೋಮವಾರವಷ್ಟೇ ಪಾಕಿಸ್ತಾನದ ಮಾಜಿ ಸಚಿವ ರೆಹಮಾನ್ ಮಲ್ಲಿಕ್, ರಾಹುಲ್ ಗಾಂಧಿ ಅವರು ಭಾರತದ ಮುಂದಿನ ಪ್ರಧಾನ ಮಂತ್ರಿಯಾಗಲಿದ್ದಾರೆ. ಅಲ್ಲದೆ, ಮೋದಿ ರಾಹುಲ್ ಅವರನ್ನು ಕಂಡು ಬೆದರಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಈ ಬಗ್ಗೆ ಮಾತನಾಡಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಅಲ್ಲಿನ ಮಾಜಿ ಮತ್ತು ಹಾಲಿ ನಾಯಕರು ರಾಹುಲ್ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು.

One Comment on “ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ: ಮೋದಿ

  1. Pingback: ವಿಶ್ವಸಂಸ್ಥೆಯನ್ನು ಪಾಕಿಸ್ತಾನವನ್ನು ಉಗಿದು ಉಪ್ಪಿನಕಾಯಿದ ಹಾಕಿದ ಸುಷ್ಮಾ ಸ್ವರಾಜ್ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: