Advertisements

ನಟ ವಿಜಿ ಮೇಲೆ ರೌಡಿಶೀಟರ್ ತೆರೆಯಲು ಪೊಲೀಸರಿಂದ ಸಿದ್ದತೆ

ನಟ ದುನಿಯಾ ವಿಜಿ ಒಳ್ಳೆಯ ಕೆಲಸಗಳಿಂದ ಸುದ್ದಿಯಾಗಿದ್ದು ಕಡಿಮೆ, ನೆಗೆಟಿವ್ ಕಾರಣದಿಂದ ಸುದ್ದಿಯಾಗಿದ್ದೇ ಹೆಚ್ಚು. ತನ್ನ ವೈಯುಕ್ತಿಕ ಜೀವನವಿರಬಹುದು, ಸಿನಿಮಾ ರಂಗವಿರಬಹುದು.

ಅದರಲ್ಲೂ ಕಾನೂನು ಹಾಗೂ ಪೊಲೀಸರೊಂದಿಗೆ ದುನಿಯಾ ವಿಜಿ ನಿಯತ್ತಿನಿಂದ ವರ್ತಿಸಿದ್ದು ಕಡಿಮೆ.

ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡಿರುವ ಪೊಲೀಸರು, ಜಿಮ್ ಟ್ರೈನರ್ ಮಾರುತಿಗೌಡ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾದ ಬೆನ್ನಲ್ಲೇ ನಟ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟರ್ ತೆರೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಪದೇ ಪದೇ ಒಂದಿಲ್ಲೊಂದು ಕಾನೂನು ಬಾಹಿರ ಕೃತ್ಯ ನಡೆಸುತ್ತಿರುವ ನಟ ದುನಿಯಾ ವಿಜಯ್, ಸದಾ ಸುದ್ದಿಯಲ್ಲಿದ್ದಾರೆ. ತಾನೊಬ್ಬ ಸೆಲೆಬ್ರೆಟಿ ಸಮಾಜಕ್ಕೆ ಮಾದರಿಯಾಗಿರಬೇಕು ಅನ್ನುವ ಕನಿಷ್ಠ ಜ್ಞಾನವಿಲ್ಲದ ವಿಜಿ ಇತ್ತೀಚೆಗೆ ದುಂಡಾವರ್ತನೆ ತೋರುತ್ತಿದ್ದಾರೆ.

ಹೊಡೆದಾಟ, ಗಲಾಟೆ, ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಾಜಿ ಯೋಧರ ಮೇಲೆ ಹಲ್ಲೆ, ಆರೋಪಿ ತಪ್ಪಿಸಿಕೊಳ್ಳಲು ನೆರವು ಹೀಗೆ ದುನಿಯಾ ವಿಜಿ ಹೆಸರು ಕೇಳಿ ಬಂದಿರುವುದು ಸಮಾಜ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಹೀಗಾಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಜಯ್ ವಿರುದ್ಧ ರೌಡಿ ಶೀಟರ್ ಓಪನ್ ಮಾಡುವುದಕ್ಕೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ವಿಜಿ ಹಲ್ಲೆ ಮತ್ತು ಬೆದರಿಕೆ ಹಾಕಿರುವ ಪ್ರಕರಣಗಳ ಕುರಿತಂತೆ ಜನ ದೂರು ಕೊಡಲು ಧೈರ್ಯ ಮಾಡಿದರೆ ಸಾಕು ಮುಂದೆ ಇತಿಹಾಸ ನಿರ್ಮಾಣವಾಗಬಹುದು.

ಈ ನಡುವೆ ಜಿಮ್ ತರಬೇತುದಾರ ಮಾರುತಿಗೌಡ ಎಂಬುವವರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್ ಠಾಣೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಠಾಣೆ ಎದುರು ಜನರು ಸೇರುವ ಸಾಧ್ಯತೆ ಇರುವುದರಿಂದ ಯಾರಿಗೂ ತಿಳಿಯದಂತೆ ಹಿಂಬಾಗಿಲ ಮೂಲಕ ವಿಜಯ್ ಅವರನ್ನು ಅನ್ಯ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisements

Leave a Reply

%d bloggers like this: