Advertisements

ಬಾಯಿಯಿಂದ ಬೆಂಕಿ ಹತ್ತಿಸಲು ಹೋಗಿ ವಿದ್ಯಾರ್ಥಿ ಸಾವು

ಬಾಯಿಯಿಂದ ಬೆಂಕಿ ಹೊತ್ತಿಸುವ ವಿದ್ಯೆ ಕಲಿಯಲು ಹೋದ 15 ವರ್ಷದ ಯುವಕನೊಬ್ಬನನ್ನು ಅದೇ ಅಗ್ನಿಯ ಕೆನ್ನಾಲಿಗೆ ಬಲಿ ತೆಗೆದುಕೊಂಡ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.

ಶುಕ್ರವಾರ ಮೊಹರಂ ಕಾರಣದಿಂದ ರಜೆ ಇದ್ದ ಕಾರಣ ಮನೆಯ ತಾರಸಿಯಲ್ಲಿ ಈ ತಂತ್ರ ಕಲಿಯುವ ಪ್ರಯತ್ನ ಮಾಡಿದ್ದಾನೆ. ಬಾಯಿಗೆ ಸೀಮೆ ಎಣ್ಣೆ ತುಂಬಿಸಿ ಬಳಿಕ ಬೆಂಕಿ ಕಡ್ಡಿ ಹಚ್ಚಿ ಬಾಯಿಯ ಮುಖಾಂತರ ಸೀಮೆಎಣ್ಣೆ ಊದಲು ಯತ್ನಿಸಿದ್ದಾನೆ. ಈ ವೇಳೆ ಊದುವಾಗ, ಸೀಮೆಎಣ್ಣೆ ಆತನ ಮೈಮೇಲೆ ಚೆಲ್ಲಿದೆ.ಹೀಗಾಗಿ ಬೆಂಕಿ ಮೈಗೆ ಹತ್ತಿಕೊಂಡಿದೆ.

ಬಾಲಕನ ಕಿರುಚಾಟ ಕೇಳಿದ ತಕ್ಷಣ ಆತನ ತಂದೆ ಮತ್ತು ನೆರೆಮನೆಯವರು ತಾರಸಿಗೆ ಓಡಿ ಬಂದಿದ್ದಾರೆ. ಅಷ್ಟು ಹೊತ್ತಿಗೆ ಆತ ತೀವ್ರ ಸುಟ್ಟ ಗಾಯಗಳಿಗೆ ತುತ್ತಾಗಿದ್ದ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಕಾಂಚಿಪುರಂನ ಉರಪ್ಪಕ್ಕಂನ ಈ ವಿದ್ಯಾರ್ಥಿ ಹತ್ತನೇ ತರಗತಿ ಕಲಿಯುತ್ತಿದ್ದ. ಮೃತ ಬಾಲಕ ಸಾಹಸ ಮನೋಭಾವವುಳ್ಳವನಾಗಿದ್ದ. ಆತನಿಗೆ ಬಾಯಿಯಿಂದ ಬೆಂಕಿ ಹೊತ್ತಿಸುವ ತಂತ್ರ ಕಲಿಯುವ ಇಂಗಿತವಿತ್ತು ಎಂದು ಘಟನೆಯ ಬಗ್ಗೆ ಗುಡುವಂಚೆರಿ ಪೊಲೀಸ್​ ಠಾಣೆಯ ಇಸ್​ಸ್ಪೆಕ್ಟರ್​ ಶರವಣನ್ ತಿಳಿಸಿದ್ದಾರೆ.

Advertisements

Leave a Reply

%d bloggers like this: