Advertisements

ರಶ್ಮಿಕಾ ಬೆನ್ನಲ್ಲೇ…ತಮಿಳಿನತ್ತ ವಲಸೆ ಹೊರಟ ಸಂಯುಕ್ತಾ ಹೆಗಡೆ

ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡಿಕೊಳ್ಳದಿರುತ್ತಿದ್ದರೆ ಸಂಯುಕ್ತಾ ಹೆಗಡೆ, ಚಂದನವನದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರು. ಜೊತೆಗೆ ಕಿರಿಕ್ ಪಾರ್ಟಿ ನಂತರ ಸಿಕ್ಕ ಕಾಲೇಜು ಕುಮಾರ ಚಿತ್ರ ತಂಡದ ಜೊತೆ ಕಿರಿಕ್ ಮಾಡಿಕೊಳ್ಳದಿರುತ್ತಿದ್ದರೆ ಸಂಯುಕ್ತಾ ಹೆಗಡೆ ಕನ್ನಡದಲ್ಲಿ ಬೇಡಿಕೆಯ ನಟಿಯಾಗಿರುತ್ತಿದ್ದರು.

ಯಾಕೆಂದರೆ ಆಕೆಗೆ ಪ್ರತಿಭೆ ಇದೆ.ನಟನೆಯ ತಾಕತ್ತು ಕೂಡಾ ಚೆನ್ನಾಗಿದೆ.ಆದರೆ ವರ್ತನೆ ಅನ್ನುವುದು ಕನ್ನಡಿಗರಿಗೆ ಹಿಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಂಯುಕ್ತಾ ವಿರುದ್ಧ ಬರುತ್ತಿರುವ ನೆಗೆಟಿವ್ ಕಮೆಂಟ್ ಗಳನ್ನು ನೋಡಿ ಯಾವ ನಿರ್ದೇಶಕರು, ನಿರ್ಮಾಪಕರು ಸಂಯುಕ್ತಾ ಹೆಗಡೆಯನ್ನು ಹಾಕಿಕೊಂಡು ಸಿನಿಮಾ ಮಾಡಲು ಧೈರ್ಯ ಮಾಡುತ್ತಿಲ್ಲ.

ಹೀಗಾಗಿ ನಟಿ ಸಂಯುಕ್ತಾ ಹೆಗಡೆ ಇತ್ತೀಚೆಗೆ ತಮಿಳಿನ ‘ಪಪ್ಪಿ’ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಈಗ ಅವರು ಸದ್ದಿಲ್ಲದೆ ಕಾಲಿವುಡ್​ನ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

37241414_1847942918632079_5788025669006917632_n

ಈ ಬಾರಿ ಅವರು ನಟ ‘ಜಯಂ’ ರವಿ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಪ್ರದೀಪ್ ರಂಗನಾಥಮ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ, ಇನ್ನೂ ಹೆಸರಿಡದ ಸಿನಿಮಾದಲ್ಲಿ ರವಿ ಹಾಗೂ ಕಾಜಲ್ ಅಗರ್​ವಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗ ಸಂಯುಕ್ತಾ ಕೂಡ ಈ ತಂಡ ಸೇರಿಕೊಂಡಿದ್ದಾರಂತೆ.

29386275_1780372005358610_4367242921559096328_n

ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದ ಸಂಯುಕ್ತಾ, ಬಳಿಕ ಕಾಲೇಜ್​ಕುಮಾರ್ ಸಿನಿಮಾದಲ್ಲಿ ನಟಿಸಿದ್ದರು. ‘ಕಿರಿಕ್ ಪಾರ್ಟಿ’ ತೆಲುಗಿಗೆ ಕಿರಿಕ್ ಪಾರ್ಟಿ ಶೀರ್ಷಿಕೆಯಲ್ಲಿ ರಿಮೇಕ್ ಆದಾಗ ಟಾಲಿವುಡ್​ಗೂ ಕಾಲಿಡುವಂತಾಯಿತು.

Advertisements

One Comment on “ರಶ್ಮಿಕಾ ಬೆನ್ನಲ್ಲೇ…ತಮಿಳಿನತ್ತ ವಲಸೆ ಹೊರಟ ಸಂಯುಕ್ತಾ ಹೆಗಡೆ

  1. Pingback: ಗೀತಾ ಗೋವಿಂದಂ ಸೆಟ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ರಶ್ಮಿಕಾ…. – torrentspree

Leave a Reply

%d bloggers like this: