Advertisements

ಅಂತು ಇಂತು…ಮಗಳು ಜಾನಕಿ ಮದುವೆಯಾಯ್ತು..ಇನ್ನು ಶುರು ಕೋರ್ಟ್ ಕಚೇರಿ

ಸಾಕಷ್ಟು ಕುತೂಹಲ ಘಟ್ಟದತ್ತ ಸಾಗುತ್ತಿರುವ ಮಗಳು ಜಾನಕಿ ಧಾರವಾಹಿಯಲ್ಲಿ, ಜಾನಕಿಯ ಮದುವೆ ಕೊನೆಗೂ ನಿರಂಜನ್ ಜೊತೆ ನಡೆದು ಹೋಗಿದೆ.

ಭಾರ್ಗಿಯ ಬಂಟರ ಕೈಯಿಂದ ಬಿಡುಗಡೆಯಾಗಿ ಬಂದಿರುವ ಆನಂದ, ಮದುವೆ ತಡೆಯಲು ಮುಂದಾದರೂ ಅದು ವಿಫಲ ಪ್ರಯತ್ನವಾಗಿ ಹೋಗಿದೆ.

ಈ ನಡುವೆ ಮದುವೆಗೆ ನಿರಂಜನ್ ಸಹೋದರ ಪ್ರಭಂಜನ ಬಂದಿರೋದು, ನಿರಂಜನ್ ನಕಲಿ ಅಪ್ಪನ ಮೇಲೆ ಭಾರ್ಗಿಯ ಕೂಗಾಟ ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಪ್ರಮುಖ ಘಟನೆಗಳಾಗುವ ಸಾಧ್ಯತೆಗಳಿದೆ.

ಜೊತೆಗೆ ಭಾರ್ಗಿಯ ಮೇಲೆ ಕಿಡ್ನಾಪ್ ಪ್ರಕರಣ ದಾಖಲಾಗುವ ಸಾಧ್ಯತೆಗಳಿದ್ದು, ಅದನ್ನು ತಡೆಯಲು ಕಸರತ್ತು ಪ್ರಾರಂಭವಾಗಿದೆ.
ಮಾತ್ರವಲ್ಲದೆ ನಿರಂಜನ್ IAS ಅಲ್ಲ ಅನ್ನುವ ಸತ್ಯ ಕೂಡಾ ಮುಂದಿನ ವಾರದಲ್ಲಿ ಬಹಿರಂಗವಾಗುವ ನಿರೀಕ್ಷೆ ಇದೆ.

ಹೀಗಾಗಿ ಮುಂದೇನು ಅನ್ನುವ ಕುತೂಹಲ ಸಹಜವಾಗಿಯೇ ವೀಕ್ಷಕರಲ್ಲಿದೆ. ಜೊತೆಗೆ ನಿರ್ದೇಶಕ ಟಿಎನ್ ಸೀತಾರಾಂ ಕೋರ್ಟ್ ಪ್ರವೇಶಕ್ಕೂ ವೇದಿಕೆ ಸಿದ್ದಗೊಂಡಿದೆ. ಹೀಗಾಗಿ ಒಂದಿಷ್ಟು ಕವನ, ಹಾಸ್ಯಗಳು ಎಂಟ್ರಿಯಾಗುವುದು ಗ್ಯಾರಂಟಿ.

Advertisements

Leave a Reply

%d bloggers like this: