ದೊಡ್ಡಣ್ಣನಿಂದ ‘ಸುಖ’ ಸಿಗಲಿಲ್ಲ – ಟ್ರಂಪ್ ಜೊತೆ ಲೈಂಗಿಕ ಕ್ರಿಯೆ ಅತ್ಯಂತ ಕನಿಷ್ಠ ಸಂತಸ ನೀಡಿತ್ತು

ಅಮೆರಿಕದ ವಿವಾದಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಲ್ಲಂಗ ಪುರಾಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ನೀಲಿ ಚಿತ್ರಗಳ ತಾರೆಯರೊಂದಿಗೆ ಚಕ್ಕಂದವಾಡಿ ಮಾಧ್ಯಮಗಳಿಗೆ ಸುದ್ದಿಗಳ ಭರ್ಜರಿ ಭೋಜನ ನೀಡುತ್ತಿರುವ ಅಧ್ಯಕ್ಷರ ರಸಿಕತೆ ಬಗ್ಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಕೇಳಿಬರುತ್ತಿವೆ. ಇದೇ ವೇಳೆ ಅಮೆರಿಕದ ಪೋರ್ನ್ ಸ್ಟಾರ್ ಸ್ಟ್ರೋಮಿ ಡೇನಿಯಲ್ಸ್, ಪಲ್ಲಂಗದಲ್ಲಿ ಟ್ರಂಪ್ ವಿಫಲತೆ ಬಗ್ಗೆ ಇದೇ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾಳೆ.

ಫುಲ್ ಡಿಸ್ಕ್ಲೋಷರ್ ಎಂಬ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಬರೆದಿರುವ ಸ್ಟಾರ್ಮಿ ಡೇನಿಯಲ್ಸ್, ” ಡೊನಾಲ್ಡ್ ಟ್ರಂಪ್ ಅಸಾಮಾನ್ಯ ಶಿಶ್ನ ಹೊಂದಿದ್ದರು. 2006 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸೆಲಬ್ರಿಟಿ ಗಾಲ್ಫ್ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಜೊತೆಗೆ ಹಾಸಿಗೆ ಹಂಚಿಕೊಂಡಿದ್ದಾಗಿ ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದಾರೆ.

ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಈ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

2462

ಸೆಲೆಬ್ರಿಟಿ ಗಾಲ್ಫ್ ಟೂರ್ನಿಮೆಂಟ್ ವೇಳೆ ಟ್ರಂಪ್ ಮತ್ತು ನನ್ನ ಸಮಾಗಮ ಆಗಿತ್ತು. ಆಗ ಟ್ರಂಪ್ ಪತ್ನಿ ಟೆಲಿವಿಷನ್ ಸ್ಟಾರ್ ಮೆಲಾನಿಯಾ, ಬರೋನ್ ಹೆಸರಿನ ಗಂಡು ಮಗುವಿಗೆ ಜನ್ಮ ನೀಡಿ ಬಾಣಂತನದಲ್ಲಿದ್ದರು. ಇದೇ ವೇಳೆ ಟ್ರಂಪ್ ನನ್ನೊಂದಿಗೆ ಚಕ್ಕಂದ ಆಡಿದರು. ಆದರೆ ಅದು ಅತ್ಯಂತ ಕನಿಷ್ಠ ಸಂತಸ ನೀಡಿತ್ತು ಎಂದು ಹೇಳಿರುವ ಸ್ಟಾರ್ಮಿ ಡೇನಿಯಲ್ಸ್, ಡೊನಾಲ್ಡ್ ಟ್ರಂಪ್ ಅವರ ಮರ್ಮಾಂಗ ಮಾರಿಯೋ ಕಾರ್ಟ್ ನಲ್ಲಿ ಬರುವ ಮಶ್ರೂಮ್ ಪಾತ್ರದ ರೀತಿಯಲ್ಲಿತ್ತು ಎಂದು ಪುಸ್ತಕದಲ್ಲಿ ಬರೆದಿರುವುದನ್ನು ದಿ ಗಾರ್ಡಿಯನ್ ವರದಿ ಮಾಡಿದೆ.

maxresdefault

ಈ ಬ್ಲೂಫಿಲ್ಮ್ ಸ್ಟಾರ್ ಬರೆದಿರುವ ಪುಸ್ತಕಕ್ಕೆ ಬಿಡುಗಡೆಗೆ ಮುನ್ನ ಭಾರೀ ಡಿಮ್ಯಾಂಡ್ ಲಭಿಸಿದೆ. ಟ್ರಂಪ್‍ನ ಪಲ್ಲಂಗ ಪುರಾಣಗಳು, ಆತನ ವಿಫಲ ಮೈಥುನಗಳ ಇತ್ಯಾದಿಗಳ ವಿವರಗಳು ಇದರಲ್ಲಿವೆ ಎನ್ನಲಾಗಿದೆ. ಅಮೆರಿಕದ ಮಹತ್ವದ ಮಧ್ಯಂತರ ಚುನಾವಣೆ ಮುನ್ನವೇ ಅಕ್ಟೋಬರ್ 2ರಂದು ಈ ಪುಸ್ತಕ ಬಿಡುಗಡೆಯಾಗಲಿದ್ದು, ಇದರ ಪ್ರತಿ ಗಾರ್ಡಿಯನ್ ಪತ್ರಿಕೆಗೆ ಲಭಿಸಿದೆ.

TrumpDaniels_may03

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: