ವರ್ಷದೊಳಗೆ ಕೋತಿ, ಹಸು ಸಂಸ್ಕೃತ, ತಮಿಳು ಮಾತನಾಡುವಂತೆ ಮಾಡ್ತಾರಂತೆ ನಿತ್ಯಾನಂದ

ಕೋತಿ, ಹಸು, ಸಿಂಹಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡಲು ಸಾಧ್ಯವೇ..ಮಾಡಿ ತೋರಿಸುತ್ತೇನೆ ಎಂದು ಪ್ರಮಾಣ ಮಾಡುವುದಾಗಿ ಸ್ವಘೋಷಿತ, ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿ ಹೇಳಿದ್ದಾರೆ.

ಭಕ್ತರನ್ನು ಉದ್ದೇಶಿಸಿ ಹೇಳಿದ ಈ ಮಾತುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೋತಿಗಳು ಸೇರಿ ಹಲವು ಪ್ರಾಣಿಗಳಿಗೆ ಮನುಷ್ಯರಲ್ಲಿರುವ ಅನೇಕ ಒಳ ಅಂಗಗಳು ಇಲ್ಲ. ಆದರೆ, ಆ ಪ್ರಾಣಿಗಳಲ್ಲಿನ ಆಂತರಿಕ ಜಾಗೃತಾವಸ್ಥೆಯನ್ನು ಬೆಳೆಸುವ ಮೂಲಕ ಮಾತನಾಡುವಂತೆ ಮಾಡಬಹುದು. ನಾನು ಇದನ್ನು ವೈಜ್ಞಾನಿಕ, ವೈದ್ಯಕೀಯ ಪರೀಕ್ಷೆ, ಸಂಶೋಧನೆ ಮೂಲಕ ಸಾಬೀತು ಪಡಿಸುತ್ತೇನೆ ಅಂದಿದ್ದಾರೆ.

ಪ್ರಾಣಿಗಳು ಮಾತನಾಡುವಂತೆ ಮಾಡಲು ಸಾಫ್ಟ್​ವೇರ್​ ಇದೆ. ಈ ಸಾಫ್ಟ್​ವೇರ್​ ಅನ್ನು ಪರೀಕ್ಷೆ ಮಾಡಿದ್ದೇನೆ. ಚೆನ್ನಾಗಿಯೇ ಕೆಲಸ ಮಾಡುತ್ತದೆ. ಇನ್ನೊಂದು ವರ್ಷದೊಳಗೆ ಸಾಫ್ಟ್​ವೇರ್​ ಅಭಿವೃದ್ಧಿಗೊಳಿಸಿ ಪ್ರಾಣಿಗಳು ಸಂಸ್ಕೃತ, ತಮಿಳು ಮಾತನಾಡುವಂತೆ ಮಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: