Advertisements

ನಿರೀಕ್ಷಿಸಿದಷ್ಟು ಮಕ್ಕಳನ್ನು ಪಡೆಯಬೇಕಾ..ಹೀಗೆ ಮಾಡಿ

ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಂಶೋಧನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಸಂಶೋಧನೆಯ ವರದಿಯಲ್ಲಿ, ಸಾಮಾನ್ಯ ಮಹಿಳೆಯರಿಗೆ ಹೋಲಿಕೆ ಮಾಡಿದರೆ, 5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಹೆಚ್ಚೆಚ್ಚು ಮಕ್ಕಳಾಗುತ್ತವೆ ಎಂದು ಹೇಳಲಾಗಿದೆ.

5 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಸ್ತನಪಾನ ಮಾಡಿರುವ ಮಹಿಳೆಯರಿಗೆ ಸಂತಾನ ಶಕ್ತಿ ಹೆಚ್ಚಾಗಿರುತ್ತದೆ ಅನ್ನುವುದನ್ನು ಈ ಸಂಶೋಧನೆ ಖಚಿತ ಪಡಿಸಿದೆ.

ಯಾರು ಕಡಿಮೆ ಸಮಯ ಸ್ತನಪಾನ ಮಾಡಿಸುತ್ತಾರೋ ಅಂತಹ ಮಹಿಳೆಯರಲ್ಲಿ ಸಂತಾನ ಶಕ್ತಿ ಕಡಿಮೆಯಾಗಿರುತ್ತದೆಯಂತೆ.ಹೆಚ್ಚು ಕಾಲ ಸ್ತನಪಾನ ಮಾಡಿಸುವ ಮಹಿಳೆಯಲು ತಾವು ನಿರೀಕ್ಷಿಸಿದಷ್ಟು ಮಕ್ಕಳನ್ನು ಪಡೆಯಬಹುದಾಗಿದೆಯಂತೆ.

ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಪಕಿ ವಿದಾ ಮರಾಲಾನಿಯವರು ಈ ಮಾಹಿತಿ ನೀಡಿದ್ದು, ಸಂಶೋಧನೆ ಸಲುವಾಗಿ ರಾಷ್ಟ್ರೀಯ ಪ್ರತಿನಿಧಿಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿದ್ದು, 1979ರಿಂದ 2012ರವರೆಗೂ 3,700 ತಾಯಿಯಂದಿರ ಮಾಹಿತಿಗಳನ್ನು ಸಂಗ್ರಹಿಸಿಲಾಗಿದೆ.

ಆದರೆ ಸಂಶೋಧನೆ ಪ್ರಕಾರ ಸ್ತನಪಾನ ಮಾಡಿಸುವ ಮಹಿಳೆಯರು ಎಷ್ಟು ಮಕ್ಕಳನ್ನು ಹೆರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಎಷ್ಟು ಸಮಯ ಮಹಿಳೆ ಸ್ತನಪಾನ ಮಾಡಿಸಬಲ್ಲಳು ಎಂಬುದನ್ನು ತಿಳಿದ ಬಳಿಕ ಆಕೆಯ ಸಂತಾನ ಶಕ್ತಿಯನ್ನು ತೀರ್ಮಾನಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisements

Leave a Reply

%d bloggers like this: