Advertisements

ಅಕ್ಟೋಬರ್ 29ರ ವರೆಗೆ ಮಂಗಳೂರು ಬೆಂಗಳೂರು ರೈಲು ಓಡುವುದಿಲ್ಲ

ಬೆಂಗಳೂರು: ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್ 29ರವರೆಗೆ ಬೆಂಗಳೂರು-ಮಂಗಳೂರು ಮಧ್ಯೆ ರೈಲ್ವೆ ಸಂಚಾರ ರದ್ದಾಗಲಿದೆ.

ಕೆಂಪೇಗೌಡ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ -ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16511/16513 ರೈಲು ಅಕ್ಟೋಬರ್ 28ರವರೆಗೆ, ಕೆಎಸ್ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16517/ 16523 ಅಕ್ಟೋಬರ್ 25ರವರೆಗೆ, ಕಣ್ಣೂರು/ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಖ್ಯೆ 16512/16524 ಅಕ್ಟೋಬರ್ 29ರವರೆಗೆ ರದ್ದು ಗೊಂಡಿದೆ.

ಇನ್ನು ವಿಶೇಷ ರೈಲು ಸಂಖ್ಯೆ 06515 ಯಶವಂತಪುರದಿಂದ ಹಾಸನದವರೆಗೆ ಅಕ್ಟೋಬರ್ 22 ಮತ್ತು 29ರಂದು, ವಿಶೇಷ ರೈಲು ಸಂಖ್ಯೆ 06576 ಹಾಸನದಿಂದ ಯಶವಂತಪುರದವರೆಗೆ ಅಕ್ಟೋಬರ್ 23ರಂದು ಸಂಚರಿಸಲಿದೆ.

ಕಳೆದ ಕೆಲ ತಿಂಗಲ ಹಿಂದೆ ಸುರಿದ ಭಾರೀ ಮಳೆಗೆ ಈ ಮಾರ್ಗದ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿತ್ತು.

ಸಕಲೇಶಪುರದವರೆಗೆ ಪ್ರಯಾಣಿಕರು ರೈಲಿನಲ್ಲಿ ಹೋಗಲು ಯಾವುದೇ ಅಡ್ಡಿಯಿಲ್ಲ, ಅಲ್ಲಿಯವರೆಗೆ ರೈಲಿನಲ್ಲಿ ಸಂಚರಿಸಿ ಅಲ್ಲಿಂದ ಪ್ರಯಾಣಿಕರು ಬೇರೆ ಸಂಚಾರ ವಾಹನಗಳನ್ನು ಬಳಸಬೇಕಾಗುತ್ತದೆ.

Advertisements

Leave a Reply

%d bloggers like this: