Advertisements

ಹೆಸರು ಬದಲಾಯಿಸಿಕೊಂಡ ಮಾನ್ವಿತಾ ಹರೀಶ್…..!

‘ಕೆಂಡಸಂಪಿಗೆ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಮಾನ್ವಿತಾ ಅವರನ್ನು ಮಾನ್ವಿತಾ  ಹರೀಶ್ ಎಂದೇ ಜನ ಗುರುತಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳನ್ನು ಮಾನ್ವಿತಾ ಹರೀಶ್ ಎಂದೇ ಅವರು ಖಾತೆ ಹೊಂದಿದ್ದರು.

ಟಗರು ಸಿನಿಮಾ ಸದ್ದು ಮಾಡಿದ ವೇಳೆಯಲ್ಲೂ ಮಾನ್ವಿತಾ, ಮಾನ್ವಿತಾ ಹರೀಶ್ ಆಗಿಯೇ ಕಾಣಿಸಿಕೊಂಡಿದ್ದರು. ಆದರೆ ಇದೀಗ  ಮಾನ್ವಿತಾ ಹರೀಶ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಚಂದನ ವನಕ್ಕೆ ಬಂದ ದಿನದಿಂದಲೂ ಮಾನ್ವಿತಾ ತಮ್ಮ ತಂದೆಯ ಹೆಸರನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದರು. ಈಗ ಮಾನ್ವಿತಾ ಹೆಸರು ಮಾನ್ವಿತಾ ಹರೀಶ್ ಬದಲಾಗಿ ಮಾನ್ವಿತಾ ಕಾಮತ್ ಎಂದಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಮಾನ್ವಿತಾ ಕಾಮತ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಮಾನ್ವಿತಾ ಕಾಮತ್ ಆಗಿ ಕಾಣಿಸಿಕೊಳ್ಳುತ್ತಾರೆಯೇ ಗೊತ್ತಿಲ್ಲ.

 

Manvitha

Advertisements

Leave a Reply

%d bloggers like this: