Advertisements

ಕನ್ನಡಕ್ಕೆ 10 ದಿನ ಕೊಟ್ರೆ ಸಾಕಾ….ರಶ್ಮಿಕ

ಕನ್ನಡದಲ್ಲಿ ಖಂಡಿತಾ ಸಿನಿಮಾ ಮಾಡ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳುತ್ತಿದ್ದಾರೆ. ಆದರೆ  ಯಜಮಾನ ಬಿಟ್ಟರೆ ಮತ್ಯಾವ ಕನ್ನಡ ಪ್ರಾಜೆಕ್ಟ್ ರಶ್ಮಿಕಾ ಕೈಯಲ್ಲಿ ಇಲ್ಲ.

ಒಪ್ಪಿಕೊಂಡಿದ್ದ ವೃತ್ರ ಸಿನಿಮಾವನ್ನು ಕೈ ಬಿಟ್ಟಿದ್ದಾರೆ. ಈಗ ಒಳ್ಳೆ ನಿರ್ಮಾಪಕರು, ನಿರ್ದೇಶಕರು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇನೆ ಅನ್ನುತ್ತಿದ್ದಾರೆ. ಅಂದರೆ ಚೆನ್ನಾಗಿರುವ ಕಥೆ ಸಿಗಲಿಲ್ಲ, ನಿರ್ಮಾಪಕರು ಸಿಗಲಿಲ್ಲ ಎಂದು ರಶ್ಮಿಕಾ ಕಥೆ ಹೇಳುತ್ತಾರೆ ಅನ್ನುವುದು ಪಕ್ಕಾ ಆಗಿದೆ.

ರಶ್ಮಿಕಾ ಅವರ ಇಂದಿನ ಸಂದರ್ಶನ ನೋಡಿದರೆ ಅವರು ಕನ್ನಡ ಚಿತ್ರರಂಗದಿಂದ ದೂರ ಸರಿಯುವ ಲಕ್ಷಣ ಗೋಚರಿಸುತ್ತಿದೆ.

 

Advertisements

Leave a Reply

%d bloggers like this: