Advertisements

ಹುಟ್ಟುಹಬ್ಬದ ದಿನದಂದೇ ಉತ್ತಮ ಪ್ರಜಾಕೀಯ ಪಕ್ಷವನ್ನು ಲೋಕಾರ್ಪಣೆ

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬದ ದಿನದಂದು ಉತ್ತಮ ಪ್ರಜಾಕೀಯ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಘೋಷಿಸಿದ ಆರು ತಿಂಗಳ ಬಳಿಕ ಇದೀಗ ಹೊಸ ಪಕ್ಷದೊಂದಿಗೆ 2ನೇ ಬಾರಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ದಿಂದ ಉಪೇಂದ್ರ ಅವರನ್ನು ಉಚ್ಛಾಟಿಸಲಾಗಿತ್ತು. ಸ್ವತಃ ಉಪೇಂದ್ರ ಅವರೇ ಕಟ್ಟಿದ್ದ ಪಕ್ಷದಲ್ಲಿ ಹೆಸರಿನ ಗೊಂದಲ ಹಾಗೂ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಪಿಜೆಪಿಯಿಂದ ಉಪೇಂದ್ರ ಅವರು ಹೊರಬಂದಿದ್ದರು.

ಇದೀಗ ತಮ್ಮ ಹೊಸ ಪಕ್ಷಕ್ಕೆ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಎಂದು ಹೆಸರಿಟ್ಟಿದ್ದು, ತಮ್ಮ ಹುಟ್ಟುಹಬ್ಬದ ದಿನವಾದ ಮಂಗಳವಾರದಂದು ಅಧಿಕೃತವಾಗಿ ಪಕ್ಷದ ಸ್ಥಾಪನೆ ಬಗ್ಗೆ ಘೋಷಿಸಿದ್ದಾರೆ.

Advertisements

Leave a Reply

%d bloggers like this: