Advertisements

ರಫೆಲ್ ಹಗರಣ ಅಂದರೇನು.. ಕಾಂಗ್ರೆಸ್ಸಿಗರೇ ಉತ್ತರಿಸಿದ್ದಾರೆ ನೋಡಿ

ಯುಪಿಎ ಸರ್ಕಾರದ ಅಧಿಕಾರ ಅವಧಿಯಲ್ಲಿ ನಡೆದ ಹಗರಣಗಳಿಗೆ ಲೆಕ್ಕವಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತ್ರ ಹಗರಣಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ಬಿಜೆಪಿ ಮೇಲೆ ಆರೋಪಿಸಲು ಕಾಂಗ್ರೆಸ್ ಪಕ್ಷಕ್ಕೆ ವಿಷಯವೇ ಇಲ್ಲದಂತಾಗಿದೆ.

ಆದರೆ ಸಿಕ್ಕಿರುವುದು ರಫೆಲ್ ಯುದ್ಧ ವಿಮಾನ ನಿಲ್ದಾಣ. ದುರಂತ ಅಂದರೆ ಇದರಲ್ಲಿ ಹಗರಣ ನಡೆದಿದೆ ಅನ್ನುವುದಾದರೆ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಬಹುದಿತ್ತು. ಆದರೆ ಹಾದಿ ಬೀದಿಯಲ್ಲಿ ನಿಂತು ಆರೋಪಗಳನ್ನು ಮಾಡುವುದರಲ್ಲಿ ಕಾಂಗ್ರೆಸ್ ನಿರತವಾಗಿದೆ. ಯಾವಾಗ ಕಾಂಗ್ರೆಸ್ ಕೋರ್ಟ್ ಮೆಟ್ಟಿಲು ಹತ್ತಲಿಲ್ಲವೋ ಅಲ್ಲಿಗೆ ಹಗರಣ ನಡೆದಿದೆ ಅನ್ನುವುದರ ಕುರಿತು ಅನುಮಾನ ಎದ್ದಿದೆ.

ಹೋಗ್ಲಿ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ರಫೆಲ್ ವಿಷಯವನ್ನು ಎತ್ತಿಕೊಂಡಿದೆ. ಕನಿಷ್ಟ ಪಕ್ಷ ಕಾರ್ಯಕರ್ತರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ತಾನೇ. ಕಾಂಗ್ರೆಸ್ ಕಾರ್ಯಕರ್ತರನ್ನು ಒಂದ್ಸಲ ಕೇಳಿ ನೋಡಿ ರಫೆಲ್ ಹಗರಣ ಅಂದರೇನು ಅಂತಾ…. ಉತ್ತರಿಸಿದರೆ ನಿಮ್ಮ ಪುಣ್ಯ.

ಮಂಗಳೂರಿನಲ್ಲೂ ಹಾಗೇ ಆಗಿದೆ. ರಫೆಲ್ ವಿರುದ್ಧ ಪ್ರತಿಭಟನೆ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಕಾರ್ಯಕರ್ತರು ಆಗಮಿಸಿದ್ದಾರೆ. ಪ್ರತಿಭಟನಾಕಾರರ ಬಳಿ ಸ್ಥಳೀಯ ಟಿವಿ ವರದಿಗಾರನೊಬ್ಬ ಹೋಗಿ ರಫೆಲ್ ಹಗರಣ ಅಂದರೇನು ಎಂದು ಕೇಳಿದರೆ, ತಾವೇ ಹಗರಣ ಮಾಡಿದ್ದೇವೆ ಅನ್ನುವಂತೆ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ಓಡಿ ಹೋಗಿದ್ದಾರೆ ( ಪಾಪ ಅವರಿಗೆ ರಫೆಲ್ ಎಬಿಸಿಡಿಯೇ ಗೊತ್ತಿಲ್ಲ) ಇನ್ನು ಕೆಲವರು ಕೊಟ್ಟ ಉತ್ತರಗಳನ್ನು ವಿವರಿಸುವುದು ಅಸಾಧ್ಯ. ನೀವೇ ನೋಡಬೇಕು.

ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡ ದಕ್ಷಿಣ ಕನ್ನಡದ ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಓದುವ ಅಗತ್ಯತೆ ಖಂಡಿತಾ ಇದೆ. ಯಾವುದೇ ಪ್ರತಿಭಟನೆಗೆ ಬರುವ ಮುನ್ನ ವಿಷಯ ತಿಳಿದುಕೊಂಡಿಲ್ಲ ಅನ್ನುವುದಾದರೆ ಕಾರ್ಯಕರ್ತ ಅನ್ನಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದೇ ಅರ್ಥ.

ಹಾಗಂತ ಬಿಜೆಪಿಯವರು ಬುದ್ದಿವಂತು ಅಂದುಕೊಳ್ಳಬೇಡಿ. ನಾಳೆ ಯಾವುದಾದರೂ ಬಿಜೆಪಿ ಪ್ರತಿಭಟನೆಗೆ ಹೋಗಿ ಕೇಳಿ…ಅಲ್ಲಿ ಪ್ರತಿಭಟನೆ ಯಾಕೆ ಎಂದು ಗೊತ್ತಿಲ್ಲದ ಅನೇಕ ಮಂದಿ ಸಿಗುತ್ತಾರೆ.

Advertisements

Leave a Reply

%d bloggers like this: