Advertisements

ಸಕ್ಕರೆ ಬದಲು ಹಾಲಿಗೆ ಯೂರಿಯಾ ಹಾಕಿದ ಸಿಬ್ಬಂದಿ – 19 ವಿದ್ಯಾರ್ಥಿಗಳು ಆಸ್ಪತ್ರೆ ಪಾಲು

ಮಕ್ಕಳು ಕುಡಿಯುವ ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಹಾಲು ಸೇವಿಸಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆದಿದೆ.

ಇಲ್ಲಿನ ನಿಲುವಾಗಿಲು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಘಟನೆ ನಡೆದಿದೆ. ಬೆಳಗ್ಗೆ ಹಾಲು ಕುಡಿಯುತ್ತಿದ್ದಂತೆ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಕೊಪ್ಪ ಮತ್ತು ಹರಿಹರಪುರ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಯ ಈ ಎಡವಟ್ಟಿನ ವಿರುದ್ಧ ಪೊಲೀಸರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಹರಿಹರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಕ್ಕಾಪಟ್ಟೆ ಬಾಯ್ ಫ್ರೆಂಡ್ಸ್ ಹೊಂದಿದ್ದ ಪತ್ರಕರ್ತೆಯನ್ನು ಕೊಚ್ಚಿ ಕೊಂದ ಪ್ರಿಯಕರ

ಅಡುಗೆ ಸಿಬ್ಬಂದಿ ಯಶೋದಮ್ಮ, ಗುಲಾಬಿ ಮತ್ತು ಶಾರದಾ ಅವರನ್ನು ವಶಕ್ಕೆ ಪಡೆಯಲಾಗಿದೆ.

Advertisements

Leave a Reply

%d bloggers like this: