Advertisements

ಸೇನೆಯ ಸಮವಸ್ತ್ರದಲ್ಲೇ ಪ್ರೇಯಸಿಗೆ ಯೋಧನಿಂದ ಪ್ರಪೋಸ್

ಕಟ್ಟಿಕೊಂಡ ಕನಸಿನಂತೆ ಸೇನೆ ಸೇರಿದ ಬೆಂಗಳೂರು ಮೂಲದ ಯೋಧರೊಬ್ಬರು ತನ್ನ ಪ್ರಿಯತಮೆಗೆ ಸಮವಸ್ತ್ರದಲ್ಲೇ ಪ್ರಪೋಸ್ ಮಾಡಿದ್ದಾರೆ. ಈ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದ್ದು, ಚೆನ್ನೈನ ರಜಪುತ್ ಸೇನಾ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದವರಿಗೆ ಅಂದು ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆ ದಿನಕ್ಕಾಗಿ ಯುವ ಪ್ರೇಮಿಯೊಬ್ಬರು ಕಾತುರದಲ್ಲಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ತನ್ನ ಪ್ರೇಯಸಿ ಬಳಿಗೆ ಧಾವಿಸಿದ ಬಂದ ಯೋಧ ಮೊಣಕಾಲು ಊರಿ, ಆಕೆಯ ಕೈಗಳನ್ನು ಹಿಡಿದು ಪ್ರಪೋಸ್ ಮಾಡಿದ್ದಾರೆ.

ಅಂದ ಹಾಗೇ ಪ್ರಪೋಸ್ ಮಾಡಿದವರು ಬೆಂಗಳೂರು ಮೂಲದ ಠಾಕೂರ್ ಚಂದ್ರೇಶ್ ಸಿಂಗ್, ಪ್ರಪೋಸ್ ಸ್ವೀಕರಿಸಿದವರು ಧಾರ ಮೆಹ್ತಾ.

ಕಳೆದ ಮೂರುವರೆ ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಆದರೆ ಚಂದ್ರೇಶ್ ಸಿಂಗ್ ಅವರಿಗೆ ಸೇನೆ ಸೇರುವ ಹಂಬಲ. ಹೀಗಾಗಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಒಪ್ಪಿಸಿ ಸೇನೆ ಸೇರಲು ಸಿದ್ದತೆ ನಡೆಸಿದರು. ಇಚ್ಛೆಯಂತೆ ಸೇನೆಗೆ ಆಯ್ಕೆ ಕೂಡಾ ಆದರು. ಕನಸು ಈಡೇರಿದ ಸಂದರ್ಭದಲ್ಲೇ ಮತ್ತೊಂದು ಕನಸು ನನಸು ಮಾಡಲು ಜೋಡಿ ನಿರ್ಧರಿಸಿತು.

ಬಿಳ್ಕೊಡುಗೆ ಕಾರ್ಯಕ್ರಮಕ್ಕೆ ಪೋಷಕರನ್ನು ಕರೆದುಕೊಂಡು ಬರುವಂತೆ ಧಾರಗೆ ತಿಳಿಸಿದ್ದ ಚಂದ್ರೇಶ್ ಸಿಂಗ್, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಧಾರ ಬಳಿ ಧಾವಿಸಿ ಪ್ರಪೋಸ್ ಮಾಡಿದ್ದಾರೆ.

1Army-Officer

ಚಂದ್ರೇಶ್ ಹಾಗೂ ಧಾರ ಬೆಂಗಳೂರಿನ ಸೆಂಟ್ ಜೋಸೆಫ್ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಜೊತೆಗೆ ಓದುತ್ತಿದ್ದರು. ಇಬ್ಬರ ವಿಷಯಗಳು ಬೇರೆ ಬೇರೆಯಾಗಿದ್ದರೂ, ಹಿಂದಿ ತರಗತಿ ಅವರನ್ನು ಸೇರುವಂತೆ ಮಾಡಿತ್ತು. ಮೊದಲ ಎರಡು ವರ್ಷ ಗೆಳೆಯರಾಗಿದ್ದವರು ಮೂರನೇ ವರ್ಷಕ್ಕೆ ಪ್ರೇಮಿಗಳಾಗಿದ್ದರು.

ಅಷ್ಟು ಹೊತ್ತಿಗೆ ಸೇನೆ ಸೇರುವ ಹಂಬಲ ಚಂದ್ರೇಶ್ ಸಿಂಗ್ ಅವರಿಗಾಯ್ತು. ಹೀಗಾಗಿ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸಿದರು. ಮೊದಲ ಪ್ರಯತ್ನ ವಿಫಲವಾಯ್ತು. ಆಗ ಧಾರ ಚಂದ್ರೇಶ್ ಸಿಂಗ್ ಗೆ ಮಾನಸಿಕ ಬೆಂಬಲವಾಗಿ ನಿಂತರು. ಎರಡನೇ ಪ್ರಯತ್ನದಲ್ಲಿ ಯಶ ಕಂಡರು. ಹೀಗಾಗಿ ಸೇನೆ ಸೇರುವ ಕನಸು ಈಡೇರಿದ ಮಧ್ಯೆ ಮದುವೆ ನಿವೇದನೆಯನ್ನೂ ಮಾಡಿಕೊಂಡಿದ್ದಾರೆ.

Army-Officer

Advertisements

Leave a Reply

%d bloggers like this: