Advertisements

ಸರ್ಜಿಕಲ್ ಸ್ಟ್ರೈಕ್ ಗೆ ಹೊರಟ ಯೋಧರ ಕೈಯಲ್ಲಿತ್ತು ಚಿರತೆಯ ಮಲ ಮೂತ್ರ….!

2016 ಸಪ್ಟಂಬರ್ 19 ರಂದು ಇಡೀ ವಿಶ್ವ ಭಾರತದತ್ತ ಮತ್ತೊಮ್ಮೆ ಹಿಂತಿರುಗಿ ನೋಡಿತ್ತು. ಭಾರತೀಯರು ಹೆಮ್ಮೆ ಪಡುವ ವಿಚಾರವೊಂದನ್ನು ಸೇನೆ ಹೊರಗೆ ಹಾಕಿದ್ದರೆ, ಅತ್ತ ಪಾಕಿಸ್ತಾನ ನಡೆದಿರುವುದೇ ಕನಸೇ ನಿಜವೇ ಎಂದು ಅರಿತುಕೊಳ್ಳುವ ಯತ್ನದಲ್ಲಿತ್ತು.

ಇಂದಿಗೂ ಅಂದು ನಡೆದ ಸರ್ಜಿಕಲ್ ಸ್ಟ್ರೈಕ್ ನ ರೋಮಾಂಚನಕಾರಿ ವಿಷಯಗಳು ಹೊರಗೆ ಬರುತ್ತಲೇ ಇದೆ. ಭಾರತೀಯ ಸೇನೆಯ ಯೋಧರ ಸಾಹಸಗಾಥೆಯನ್ನು ಕೇಳುತ್ತಿದ್ದರೆ, ಹೆಮ್ಮೆ ಅನ್ನಿಸುತ್ತದೆ.

ಅಂತಹುದೇ ಮತ್ತೊಂದು ವಿಚಾರ ಇದೀಗ ಹೊರ ಬಿದ್ದಿದೆ.

ಇದನ್ನು ಮಾಜಿ ನಗ್ರೋಟಾ ಕಾಪ್ರ್ಸ್ ಕಮಾಂಡರ್ ಲೆ.ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ.

L-G-Rajendra-Nimborkar

ಪುಣೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಸರ್ಜಿಕಲ್ ಸ್ಟ್ರೈಕ್ ಅನುಭವ ಹಾಗೂ ತಯಾರಿಯ ಮಾಹಿತಿಗಳನ್ನು ಹೊರ ಹಾಕಿದ್ದಾರೆ.

ಭಾರತದ ಗಡಿ ಪ್ರವೇಶಿಸುತ್ತಿದ್ದ ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಮಟ್ಟಹಾಕಲೇ ಬೇಕು ಎಂದು ಸೇನೆಯ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದರು. ಅದಕ್ಕೆ ಬೇಕಾದ ಮಾಸ್ಟರ್ ಪ್ಲಾನ್ ಕೂಡಾ ರೆಡಿಯಾಗಿತ್ತು. ಬೇಕಾಗಿದದ್ದು, ಪ್ರಧಾನಿ ಹಾಗೂ ರಕ್ಷಣಾ ಸಚಿವರ ಅನುಮತಿ.

ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಸೇನೆಯ ಸಾಧನೆಯನ್ನು ಕಂಡು ಹೆಮ್ಮೆ ಪಟ್ಟಿದ್ದರು. ಹೀಗಾಗಿ ಸರ್ಜಿಕಲ್ ಸ್ಟ್ರೈಕ್ ಅನ್ನುವ ಸಾಧನೆಗೆ ಹಸಿರು ನಿಶಾನೆ ತೋರಿದ್ದರು. ಮಾತ್ರವಲ್ಲದೆ ಈ ಕಾರ್ಯಾಚರಣೆ ನಡೆಸಲು ಸೇನೆ ಕಾಪಾಡಿಗೊಂಡಿದ್ದ ಗೌಪ್ಯತೆಯನ್ನು ಅವರು ಉಳಿಸಿಕೊಟ್ಟಿದ್ದರು.

ದಾಳಿಗೆ ಸಿದ್ದತೆ ಸಾಕಷ್ಟು ದಿನಗಳ ಹಿಂದೆ ನಡೆದಿದ್ದರು, ಅದರ ಅರಿವಿದ್ದದ್ದು ಕೆಲವೇ ಮಂದಿಗೆ. ದಾಳಿ ನಡೆಸುವ ಒಂದು ವಾರದ ಮುಂಚೆಯಶ್ಟೇ ಉನ್ನತ ಅಧಿಕಾರಿಗಳಿಗೆ ರಕ್ಷಣಾ ಸತಿವರು ಮಾಹಿತಿ ನೀಡಿದ್ದರು. ಮಾತ್ರವಲ್ಲದೆ ಒಂದು ವಾರದಲ್ಲಿ ಯೋಜನೆ ಜಾರಿ ಮಾಡುವಂತೆ ನಿರ್ದೇಶಿಸಿದ್ದರು.

ಎಲ್ಲಿಯವರೆಗೆ ಗೌಪ್ಯತೆ ಇತ್ತು ಅಂದರೆ ದಾಳಿ ನಡೆಸಬೇಕಾದ ಯೋಧರಿಗೆ ದಾಳಿ ಕುರಿತು ಮಾಹಿತಿ ನೀಡಿರಲಿಲ್ಲ. ಕೇವಲ ಸಲಹೆ ನೀಡಲಾಗಿತ್ತು. ದಾಳಿಯ ದಿನವೇ ಖಚಿತ ಮಾಹಿತಿ ನೀಡಲಾಗಿತ್ತು.

ಇನ್ನೇನು ದಾಳಿಗೆ ಸಿದ್ದವಾಗಬೇಕು, ಉಳಿದಿರುವುದು ಕೆಲವೇ ಗಂಟೆಗಳು ಅಂದಾಗ ಸಮಸ್ಯೆಯೊಂದು ಸೃಷ್ಟಿಯಾಯ್ತು. ಪಾಕಿಸ್ತಾನದ ಗಡಿ ತಲುಪುವ ಹೊತ್ತಿಗೆ ಕೆಲ ಗ್ರಾಮಗಳನ್ನು ದಾಟಿ ಹೋಗಬೇಕು. ಅಲ್ಲಿ ನಾಯಿಗಳ ಕಾಟವಿದೆ. ರಾತ್ರಿಯ ಹೊತ್ತಿನಲ್ಲಿ ಹೋಗುವಾಗ ಅವರು ಬೊಗಳಲು ಪ್ರಾರಂಭಿಸಿದರೆ ಅನ್ನುವ ಚಿಂತೆ ಶುರುವಾಯ್ತು.

ಹಾಗಂತ ದಾಳಿಯಿಂದ ಹಿಂದೆ ಸರಿಯುವ ಪ್ರಶ್ನಯೇ ಇರಲಿಲ್ಲ. ನಾಯಿಗಳು ಬಂಧಿಸಿ ತಂದರೆ ಅದ್ಯಾಕೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ಯೋಧರು ಸಾಗುವ ವೇಳೆ ನಾಯಿಗಳು ಬೊಗಳಲು ಪ್ರಾರಂಭಿಸಿದರೆ ಕೆಲಸ ಕೆಡುತ್ತದೆ. ಮಾತ್ರವಲ್ಲದೆ ನಾಯಿಗಳು ಯೋಧರ ಮೇಲೆ ದಾಳಿ ನಡೆಸುವ ಸಾಧ್ಯತೆಯೂ ಇತ್ತು. ಹೀಗಾಗಿ ಚಿರತೆ ಮಲ ಹಾಗೂ ಮೂತ್ರವನ್ನು ಜೊತೆಗೆ ಒಯ್ಯಲು ನಿರ್ಧರಿಸಲಾಯ್ತು.

ನಾಯಿಗಳ ಕಾಟವನ್ನು ನಿಯಂತ್ರಿಸುವ ಸಲುವಾಗಿ ಚಿರತೆಯ ಮೂತ್ರವನ್ನು ಹಳ್ಳಿಯ ಸುತ್ತಲು ಅಂದರೆ ಯೋಧರು ಹಾದು ಹೋಗುವ ದಾರಿ ಹಾಗೂ ಸುತ್ತ ಮುತ್ತ ಚೆಲ್ಲಲಾಯ್ತು,

ಚಿರತೆ ಮೂತ್ರದ ವಾಸನೆ ಕಂಡ ನಾಯಿಗಳು ಹೆದರಿ ಸೈಲೆಂಟ್ ಆಗಿವೆ. ಯೋಧರು ಸದ್ದಿಲ್ಲದೆ ಪಾಕಿಸ್ತಾನ ಗಡಿ ದಾಟಿದ್ದಾರೆ.
ನಸುಕಿನ 3.30ರ ವೇಳೆ ದಾಳಿ ನಡೆಸಿದ ಭಾರತೀಯ ಯೋಧರು 29 ಭಯೋತ್ಪಾದಕರು ಹಾಗೂ ಉಗ್ರರರಿಗೆ ತರಬೇತಿ ನೀಡಲು ತೆರೆಯಲಾಗಿದ್ದ ಮೂರು ಲಾಂಚಿಂಗ್ ಪ್ಯಾಡ್ ಗಳನ್ನು ಧ್ವಂಸ ಮಾಡಿ ಪಾಕ್ ಮಿಲಿಟರಿಗೆ ಶಾಕ್ ಕೊಟ್ಟು ಹಿಂತಿರುಗಿದ್ದರು.

Advertisements

Leave a Reply

%d bloggers like this: