Advertisements

ಎಣ್ಣೆ ಏಟಿನಲ್ಲಿ ಹಾವು ನುಂಗಿದ ಭೂಪ….!

ಎಣ್ಣೆ ಹೊಟ್ಟೆ ಸೇರಿತು ಅಂದರೆ ನಾವೇನು ಮಾಡುತ್ತಿದ್ದೇವೆ ಅನ್ನುವ ಅರಿವು ವ್ಯಕ್ತಿಗಳಿಗೆ ಇರುವುದಿಲ್ಲ.

ಹೀಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಜೀವಂತ ಹಾವನ್ನು ನುಂಗಿ ಪ್ರಾಣ ಕಳೆದುಕೊಂಡ ಘಟನೆ ಘಟನೆ ಉತ್ತರಪ್ರದೇಶದ ಅಮ್‌ರೋಹ ಜಿಲ್ಲೆಯಲ್ಲಿ ನಡೆದಿದೆ.

40 ವರ್ಷದ ಮಹಿಪಾಲ್‌ ಸಿಂಗ್‌ ಸಿಕ್ಕಾಪಟ್ಟೆ ಕುಡಿದು ಮನೆ ಕಡೆ ಹೊರಟಿದ್ದ. ಈ ವೇಳೆ ರಸ್ತೆಯಲ್ಲಿ ಹಾವೊಂದು ಕಂಡಿದೆ. ಬುದ್ದಿ ಎಣ್ಣೆ ಕೈಯಲ್ಲಿದ್ದ ಕಾರಣ ಹಾವನ್ನು ಕೈಗೆ ತೆಗೆದುಕೊಂಡಿದ್ದಾನೆ. ಈ ವೇಳೆ ಎದುರು ಸಿಕ್ಕ ಯುವಕರ ಗುಂಪೊಂದು ಸಿಂಗ್ ನನ್ನು ಮತ್ತಷ್ಟು ರೊಚ್ಚಿಗೆ ಎಬ್ಬಿಸಿದೆ.

ನಿನ್ನ ಫೋಟೋ ತೆಗೆಯುತ್ತೇವೆ ಎಂದೆಲ್ಲಾ ಕಾಗೆ ಹಾರಿಸಿದ್ದಾರೆ.ಯುವಕರ ಪ್ರಚೋದನೆಯಿಂದ ಸಿಂಗ್ ಅದರೊಂದಿಗೆ ಆಟವಾಡಿದ್ದಾನೆ.ಅಲ್ಲೇ ನೆರೆದಿದ್ದವರು ಈ ದೃಶ್ಯವನ್ನೆಲ್ಲ ರೆಕಾರ್ಡ್‌ ಮಾಡಿದ್ದಾರೆ.ನಂತರ ಅದನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡು ತಲೆಯ ಮೇಲೂ ಇಟ್ಟುಕೊಂಡಿದ್ದಾನೆ. ನಂತರ ಕೆಲವರು ಹಾವನ್ನು ಬಾಯಲ್ಲಿ ಇಟ್ಟುಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.

ಆದರೆ ಅಷ್ಟು ಹೊತ್ತಿಗೆ ಆತನ ಅದೃಷ್ಟ ಕೈ ಕೊಟ್ಟಿತ್ತು. ಬಾಯಿ ಸಮೀಪ ಹಾವು ತರುತ್ತಿದ್ದಂತೆ ಆತನ ಕೈ ಜಾರಿದ ಹಾವು ಬಾಯಿ ಒಳಹೋಗಿದೆ.ನಂತರ ಶ್ವಾಸನಾಳಕ್ಕೆ ತಲುಪಿದೆ. ಬಳಿಕ ಅಸ್ವಸ್ಥಗೊಂಡ ಮಹಿಪಾಲ್‌ ಸಿಂಗ್‌ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಇದರ ವಿಡಿಯೋ ಇದೀಗ ವೈರಲ್ ಆಗಿದೆ.

Advertisements

Leave a Reply

%d bloggers like this: