Advertisements

ಕ್ಷಣ ಮಾತ್ರದಲ್ಲಿ ಕಾರ್ಮಿಕರೊಂದಿಗೆ ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡ

ಅಪಘಾತ ಅನ್ನುವುದು ಯಾವಾಗ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಎಲ್ಲಿ,ಯಾವಾಗ, ಹೇಗೆ ಕೆಲವೊಂದು ಅಪಘಾತದಲ್ಲಿ ನಡೆಯುತ್ತದೆ ಎಂದು ಭವಿಷ್ಯ ನುಡಿಯುವುದು ಅಸಾಧ್ಯ.

ಹಾಗಂತ ಎಲ್ಲಾ ಅಪಘಾತಗಳು ಹಾಗಲ್ಲ. ಕೆಲವೊಂದು ಸಲ ನಮ್ಮದೇ ತಪ್ಪುಗಳಿಂದ ನಡೆದು ಹೋಗುತ್ತದೆ.ಅದರಲ್ಲೂ ನಿರ್ಮಾಣ ಹಂತದ ಕಟ್ಟಡ ಕುಸಿಯುವುದಕ್ಕೆ ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ.

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೆ ಸಾಕು ಆಗಬಹುದಾದ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ.

ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಟ್ಟಡ ಕಾರ್ಮಿಕರು ಸೈಟ್ ನಲ್ಲಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.ಮೊದಲ ಮಹಡಿಯ ಪ್ಲೋರ್ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು.

2018-09-10_13-58-05

ಕೆಲವೇ ಕ್ಷಣ ಕಣ್ಣ ರೆಪ್ಪೆ ಮುಚ್ಚಿ  ತೆಗೆಯುವ ಹೊತ್ತಿಗೆ ಅದ್ಯಾವ ಆಧಾರ ಕುಸಿದು ಬಿತ್ತೋ ಗೊತ್ತಿಲ್ಲ. ನಿರ್ಮಾಣದ ಹಂತದ ಮಹಡಿ ಕುಸಿಯಲಾರಂಭಿಸಿದೆ.

3

ಕ್ಷಣ ಮಾತ್ರದಲ್ಲಿ ನಡೆದ ಘಟನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದ ಅರ್ಧದಷ್ಟು ಕಾರ್ಮಿಕರು ನೆಲಕ್ಕೆ ಉರುಳಿದ್ದಾರೆ. ಇನ್ನುಳಿದವರು ಬದುಕಿದರೆ ಸಾಕು ಎಂದು ಓಡಿ ಹೋಗಿದ್ದಾರೆ.

2

ಆದರೆ ಅದೃಷ್ಟ ಚೆನ್ನಾಗಿತ್ತು. ಬಿದ್ದ ಕಾರ್ಮಿಕರು ಒಬ್ಬೊಬ್ಬರಾಗಿ ಎದ್ದು ಬಂದಿದ್ದಾರೆ. ಘಟನೆ ನಡೆದದ್ದು ಎಲ್ಲಿ ಎಂದು ಗೊತ್ತಾಗಿಲ್ಲ. ಆದರೆ ಇಡೀ ಘಟನೆಯಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ.

https://www.facebook.com/plugins/video.php?href=https%3A%2F%2Fwww.facebook.com%2FTechnology55Learn%2Fvideos%2F690933027933701%2F&show_text=0&width=560

Advertisements

Leave a Reply

%d bloggers like this: