Peruser!!! It is a trendy supermarket: read articles on day to day basis in English & Kannada. Read,Share & Care
2017 ಜುಲೈ 3ರಂದು ಈ ಜೋಡಿ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದ ಕಿರಿಕ್ ಪಾರ್ಟಿ ಚಿತ್ರದ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇನ್ನು ಕೆಲವೇ ವರ್ಷಗಳಲ್ಲಿ ಮದುವೆ ಎಂದು ಘೋಷಿಸಿಕೊಂಡಿತ್ತು. ಆದರೆ ಇದೀಗ ಹಸೆಮಣೆ ಏರಬೇಕಾದ ಜೋಡಿ ನಾನೊಂದು ತೀರ, ನೀನೊಂದು ತೀರಾ ಅಂದಿದೆ.
ಚಂದನವನ ಮೆಚ್ಚಿಕೊಂಡಿದ್ದ ಕ್ಯೂಟ್ ಜೋಡಿಯ ನಿಶ್ಚಿತಾರ್ಥ ಮುರಿದು ಬಿದ್ದಿರುವ ಸುದ್ದಿ ಬಂದಿದ್ದು, ಕಿರಿಕ್ ಪಾರ್ಟಿಯ ಕರ್ಣ ಮತ್ತು ಸಾನ್ವಿ ತಮ್ಮ ವೃತ್ತಿ ಜೀವನದ ಕಾರಣದಿಂದ ದೂರವಾಗಲು ನಿರ್ಧರಿಸಿದ್ದಾರೆ.
ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಲಿಪ್ಲಾಕ್ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆವಾಗಲೇ ರಶ್ಮಿಕಾ ಮತ್ತು ರಕ್ಷಿತ್ ದೂರವಾಗುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಇದು ಸುಳ್ಳು ಎಂದು ಇಬ್ಬರೂ ಹೇಳಿಕೊಂಡಿದ್ದರು.
ಆದರೆ ಸುಳ್ಳು ಸುಳ್ಳು ಸುಳ್ಳು ಅಂದಿದ್ದು ನಿಜವಾಗಿದೆ.ಎರಡೂ ಕುಟುಂಬಗಳು ಕುಳಿತು ಮಾತನಾಡಿ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಎರಡೂ ಕುಟುಂಬದ ಹಿರಿಯರು ಮತ್ತು ಸ್ನೇಹಿತರ ಜೊತೆ ಸಮಾಲೋಚನೆ ನಡೆಸಿ ದೂರವಾಗುವ ನಿರ್ಧಾರಕ್ಕೆ ಬರಲಾಗಿದೆ ಅನ್ನಲಾಗಿದೆ.
ಇವರಿಬ್ಬರ ಬ್ರೇಕ್ ಅಪ್ ಸುದ್ದಿ ಯಾವಾಗ ಗಾಸಿಪ್ ಸ್ವರೂಪದಲ್ಲಿ ಹುಟ್ಟಿಕೊಂಡಿತ್ತೋ…. ಅವರಿಬ್ಬರೂ ಸುಳ್ಳು ಎಂದು ಸಾರಿದರು. ಆದರೆ ಈ ಸುದ್ದಿಯ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದರು.ತಮ್ಮ ಎಲ್ಲಾ ಸಾಮಾಜಿಕ ಜಾಲ ತಾಣ ಖಾತೆಗಳನ್ನು ಸ್ಥಗಿತಗೊಳಿಸಿದ್ದರು.
ಜೊತೆಗೆ ತೆಲುಗಿನ ಕೆಲ ಸಿನಿ ಪ್ರೇಮಿಗಳು ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರ ಕೈ ಹಿಡಿಯಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.