Advertisements

Shocking Video – LIVE ಕಾರ್ಯಕ್ರಮದಲ್ಲಿ ಸಾವು ಕೂಡಾ LIVE ಆಯ್ತು

ಜಮ್ಮು ಕಾಶ್ಮೀರದ ಹೆಸರಾಂತ ವಿದ್ವಾಂಸರಾದ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ರೀತಾ ಜೆತಿಂದರ್‌ ಟಿ.ವಿ. ಕಾರ್ಯಕ್ರಮದ ಸಂದರ್ಶದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ರೀತಾ ಜೆತಿಂದರ್ ಸಾಮಾಜಿಕ ಕಾರ್ಯಕರ್ತೆ ಹಾಗೂ ಡೋಗ್ರಿ ಭಾಷಾ ತಜ್ಞೆಯಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.

ಸರಕಾರಿ ಸ್ವಾಮ್ಯದ ದೂರದರ್ಶನ ನೇರಪ್ರಸಾರ ಕಾರ್ಯಕ್ರಮ ನಡೆಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರೀತಾ ಅವರು ಸಂದರ್ಶಕರ ಜೊತೆ ಮಾತಾನಾಡುವಾಗಲೇ ರೀತಾ ಕುಸಿದಿದ್ದಾರೆ.

ಈ ಸಂದರ್ಭದಲ್ಲಿ ಸಂದರ್ಶಕರು ರೀತಾ ಅವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಏದುಸಿರು ಬಿಟ್ಟು, ಹಾಗೆಯೇ ಕುರ್ಚಿಗೆ ಒರಗಿದ್ದಾರೆ. ಒಂದೇ ಕ್ಷಣದಲ್ಲಿ ಏನಾಗುತ್ತಿದೆ ಎಂಬುದನ್ನು ಅಲ್ಲಿದ್ದವರು ಆಲೋಚಿಸುವುದರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಅವರ ಸಾವಿಗೆ ಹೃದಯ ಸ್ತಂಭನ ಕಾರಣ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಕಲೆ, ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದರು.
ಶ್ರೀನಗರದ ದೂರದರ್ಶನ ಕೇಂದ್ರದಲ್ಲಿ ಇಂದು ಬೆಳಗ್ಗೆ 8.30ಕ್ಕೆ ನಡೆಯುತ್ತಿದ್ದ ‘ಗುಡ್ ಮಾರ್ನಿಂಗ್ ಜೆಕೆ’ ಕಾರ್ಯಕ್ರಮದಲ್ಲಿ ಲೇಖಕಿ, ಶಿಕ್ಷಣ ತಜ್ಞೆ ಪ್ರೊ.ರೀತಾ ಜೆತಿಂದರ್ ಅವರು ಅತಿಥಿಯಾಗಿ ಭಾಗವಹಿಸಿದ್ದರು.

Advertisements

Leave a Reply

%d bloggers like this: