Advertisements

ಯಶ್ ಗೆ ಮುಖಭಂಗ- ಬಾಡಿಗೆ ಕಟ್ಟಿ,ಇಲ್ಲವೇ ಮನೆ ಖಾಲಿ ಮಾಡಿ ತಾಯಿಗೆ ಹೈಕೋರ್ಟ್ ಆದೇಶ

ಬಾಡಿಗೆ ಮನೆ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ಯಶ್ ಈ ಹಿಂದೆ ಸಾಕಷ್ಟು ಮಾತನಾಡಿದ್ದರು. ಕೆಳ ನ್ಯಾಯಾಲಯದ ಆದೇಶದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮನೆ ಮಾಲೀಕರ ವಿರುದ್ಧವೇ ಮಾತನಾಡಿದ್ದರು. ಬಳಿಕ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ಯಶ್ ಅವರ​ ತಾಯಿಗೆ ಹೈಕೋರ್ಟ್​ನಲ್ಲಿಯೂ ಭಾರಿ ಹಿನ್ನೆಡೆಯಾಗಿದೆ.

ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್​, ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ಆದೇಶಿಸಿದೆ.

23.27 ಲಕ್ಷ ರೂ. ಬಾಡಿಗೆ ಪಾವತಿಸುವಂತೆ ಸೂಚನೆ ನೀಡಿರುವ ನ್ಯಾಯಾಲಯ​​ ತಕ್ಷಣ ಪಾವತಿಸಿದರೆ ಮುಂದಿನ ಮಾರ್ಚ್​ 31ರ ವರೆಗೆ ಇರಬಹುದು.ಇಲ್ಲವಾದಲ್ಲಿ ಡಿಸೆಂಬರ್​​ಗೆ ಮನೆ ಖಾಲಿ ಮಾಡಿ ಎಂದಿದೆ.

ಮುನಿ ಪ್ರಸಾದ್​ ಹಾಗೂ ಡಾ.ವನಜಾ ಅವರಿಗೆ ಸೇರಿದ ಕತ್ರಿಗುಪ್ಪೆಯಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದ, ಯಶ್ ಹಾಗೂ ಕುಟುಂಬ ಇದನ್ನು ಅದೃಷ್ಟದ ಮನೆ ಎಂದು ನಂಬಿತ್ತು. ಬಳಿಕ ಮನೆ ಮನೆ ಖಾಲಿ ಮಾಡಲು ನಿರಾಕರಿಸಿದ್ದರು. ಬಾಡಿಗೆಯನ್ನು ಪಾವತಿಸಿ ಇರಲಿಲ್ಲ. ಆದರೆ ಯಶ್ ಬಾಡಿಗೆ ಪಾವತಿಸಿರುವುದಾಗಿ ಹೇಳಿದ್ದರು.

ನ್ಯಾಯಮೂರ್ತಿಗಳಾದ ಬೋಪಣ್ಣ, ಶ್ರೀನಿವಾಸ್ ಹರೀಶ್‌ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.

Advertisements

Leave a Reply

%d bloggers like this: